Contribution to the strengthening of democracy 
ರಾಜ್ಯ

ಪ್ರಜಾಪ್ರಭುತ್ವದ ಬಲವರ್ಧನೆಗೆ ಕೊಡುಗೆ

ಬರಗೂರು: ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂವಿಧಾನ ಶಿಲ್ಪಿ ಡಾ.ಬಿ ಆರ್​ ಅಂಬೇಡ್ಕರ್​ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಯುವಕರು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಳವಳಿ ರಾಜಣ್ಣ ಹೇಳಿದರು.
ಡಾ.ಬಿ.ಆರ್​ ಅಂಬೇಡ್ಕರ್​ ಅವರ ಜಯಂತಿಯ ಅಂಗವಾಗಿ ಮಂಗಳವಾರ ಬರಗೂರು ನಗರದಲ್ಲಿರುವ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಪ್ರಜಾಪ್ರಭುತ್ವದ ಬಲವರ್ಧನೆಗೆ ಅಂಬೇಡ್ಕರ್​ ಅವರ ಕೊಡುಗೆ ಅಪಾರ ಜಾತಿ ವ್ಯವಸ್ಥೆಯಲ್ಲಿ ಅಂಬೇಡ್ಕರ್​ ಅವರ ತ್ಯಾಗ ಪರಿಶ್ರಮ ಆದರ್ಶಗಳನ್ನು ಸಮಾಜ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದಿರುವುದು ನಮಗೆ ನೋವಾಗಿದೆ ಎಂದರು.\
ಕರ್ನಾಟಕ ದಲಿತ ಸಂಘರ್ಫಿ ಸಮಿತಿ ಹುಲಿಕುಂಟೆ ಹೋಬಳಿ ಘಟಕ ಅಧ್ಯಕ್ಷ ಕಂಬಿ ಮಂಜುನಾಥ್​ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​ ಅವರ ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಪ್ರತಿ ಮನೆ ಮನಗಳಲ್ಲಿ ಅವರ ಭಾವಚಿತ್ರ ಇಟ್ಟು ಪೂಜಿಸುವಂತಾಗಬೇಕು ಎಂದರು.