ಹುಮನಾಬಾದ್​ನಲ್ಲಿ ಶನಿವಾರ ರೋಟರಿ ಕ್ಲಬ್​ ಆಫ್​ ಹುಮನಾಬಾದ್​ ಎಲೈಟ್​ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ರೋಟರಿಯನಗಳಾದ ಡಾ.ರು ಕೃಷ್ಣಮೂರ್ತಿ, ಶಿವಕುಮಾರ ಯಲಾಲ್​, ನಾಗರಾಜ ಕರ್ಪೂರ, ನಿತೀನ ಕರ್ಪೂರ,ಅಭಿಷೇಕ ಚಿದ್ರಿ, ನದೀಮ್​ ಸಜ್ಜಾದ, ಪ್ರಕಾಶ ತಡಪಟ್ಟಿ, ನಾಗಶೆಟ್ಟಿ ಲಕೋಟಿ, ಡಾ.ಶಶಿಕಾಂತ ಹಾರಕೂಡ, ಪ್ರಶಾಂತ ಸಾಗರ ಇದ್ದರು. 
ರಾಜ್ಯ

ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಡಾ.ರು ಕೃಷ್ಣಮೂರ್ತಿ ಅನಿಸಿಕೆ
  • ಹುಮನಾಬಾದ್​ನಲ್ಲಿ ರೋಟರಿ ಕ್ಲಬ್​ನಿಂದ ಹೊಲಿಗೆ ಯಂತ್ರ ವಿತರಣೆ
ಹುಮನಾಬಾದ್​: ರೋಟರಿ ಕ್ಲಬ್​ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸದಾ ಬದ್ಧವಾಗಿದ್ದು, ಶಿಣ, ಆರೋಗ್ಯ ಹಾಗೂ ಜೀವನೋಪಾಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ರೋಟರಿ ಕ್ಲಬ್​ ಜಿಲ್ಲಾ ಸಂಯೋಜಕ ಡಾ.ರು ಕೃಷ್ಣಮೂರ್ತಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ರೋಟರಿ ಕ್ಲಬ್​ ಆಫ್​ ಹುಮನಾಬಾದ್​ ಎಲೈಟ್​ ವತಿಯಿಂದ ಜಿಲ್ಲಾ ಅನುದಾನ ಯೋಜನೆಯಡಿ ತಾಲೂಕಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದರ ಮೂಲಕ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಏಲೈಟ್​ ಕ್ಲಬ್​ ಸಂಸ್ತಾಪಕ ಅಧ್ಯ ನಾಗರಾಜ ಕರ್ಪೂರ ಮಾತನಾಡಿ, ಕ್ಲಬ್​ ವತಿಯಿಂದ ತಾಲೂಕಿನಲ್ಲಿ ನಾನಾ ಕಾರ್ಯಚಟುವಟಿಕೆ ಮಾಡಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ಸೈಕಲ್​ ವಿತರಣೆ ಸಹ ಮಾಡಲಾಗಿದೆ. ಈಗ ಒಟ್ಟು ನಾಲ್ಕು ಜನ ಮಹಿಳಾ ಫಲಾನುಭವಿಗಳಿಗೆ ಹೋಲಿಗೆ ಯಂತ್ರ ವಿತರಿಸಲಾಗಿದೆ ಎಂದರು.
ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ನೂತನ ಅಧ್ಯರಾಗಿ ಆಯ್ಕೆಗೊಂಡಿರುವ ರೋಟರಿಯನ್​ ಸಂಜೀವಕುಮಾರ ಜುನ್ನಾ ಅವರಿಗೆ ಕ್ಲಬ್​ ವತಿಯಿಂದ ಸನ್ಮಾನಿಸಲಾಯಿತು.
ಕಲ್ಯಾಣ ವಿಭಾಗದ ಸಹಾಯಕ ಗೌರ್ನರ್​ ನಿತೀನ ಕರ್ಪೂರ, ಜಿಲ್ಲಾ ರೋಟರಿಯನ್​ ಶಿವಕುಮಾರ ಯಲಾಲ್​, ಕ್ಲಬ್​ ಅಧ್ಯ ಅಭಿಷೇಕ ಚಿದ್ರಿ, ಕಾರ್ಯದರ್ಶಿ ನದೀಮ್​ ಸಜ್ಜಾದ, ಜಂಟಿ ಕಾರ್ಯದರ್ಶಿ ಪ್ರಕಾಶ ತಡಪಟ್ಟಿ, ಖಜಾಂಚಿ ನಾಗಶೆಟ್ಟಿ ಲಕೋಟಿ, ರೋಟರಿಯನಗಳಾದ ಡಾ.ಶಶಿಕಾಂತ ಹಾರಕೂಡ, ಪ್ರಶಾಂತ ಸಾಗರ, ಶರಣು ಕಡ್ಯಾಳೆ, ನರೇಂದ್ರ ಪಟೇಲ್​, ಮಾಣಿಕಪ್ಪ ಬಕ್ಕನ ಇತರರಿದ್ದರು.