ಯಳಂದೂರು ತಾಲೂಕಿನ ಉಪ್ಪಿಮೋಳೆ ಗ್ರಾಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಕ್ರಿಶ್ಚಿಯನ್ ಸಮುದಾಯ ವತಿಯಿಂದ ಸನ್ಮಾನಿಸಲಾಯಿತು.
- ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ
- ಕೊಳ್ಳೇಗಾಲ ತಾಲೂಕಿನ 12 ಚರ್ಚ್‌ಗಳ ಫಾದರ್‌ಗಳು ಹಾಗೂ ಸಭಾಪಾಲಕರು
ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಕೊಳ್ಳೇಗಾಲ ತಾಲೂಕಿನ 12 ಚರ್ಚ್‌ಗಳ ಫಾದರ್‌ಗಳು ಹಾಗೂ ಸಭಾಪಾಲಕರು ಶನಿವಾರ ತಾಲೂಕಿನ ಉಪ್ಪಿನಮೋಳೆ ಗ್ರಾಮದ ಅವರ ನಿವಾಸದಲ್ಲಿ ಸನ್ಮಾನಿಸಿದರು.
ಕೊಳ್ಳೇಗಾಲ ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಸೆಲ್ವರಾಜು ಹಾಗೂ ಬೆತೇಲ್ ಲೂಥರನ್ ಚರ್ಚ್ ಅಧ್ಯಕ್ಷ ಟಿ. ಜಾನ್ ಪೀಟರ್ ನೇತೃತ್ವದಲ್ಲಿ ಸಚಿವರ ಮನೆಗೆ ಆಗಮಿಸಿದ ಫಾದರ್‌ಗಳು ಹಾಗೂ ಸಭಾಪಾಲಕರು ಪ್ರಾರ್ಥನೆ ಸಲ್ಲಿಸಿ ಸನ್ಮಾನಿಸಿದರು. ಅಂತೆಯೇ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾಮಗೆರೆ ಎಸ್‌ಡಿಎ ಚರ್ಚ್ ನ ಫಾದರ್ ಆಂಟನಿ ಕುಮಾರ್, ಕೊಳ್ಳೇಗಾಲ ಬೆತೇಲ್ ಲೂಥರನ್ ಚರ್ಚಿನ ಫಾದರ್ ಜೋಸುವ ಪ್ರಸನ್ನ, ಸಭಾಪಾಲಕ ರೆವರೆಂಡ್ ಆಡಿಸ್ ಅರಾಲ್ಡ್, ಎಬಿನೇಜರ್ ಬ್ರದರನ್ ಸಭೆಯ ಕರುಣಾಕರ್, ಸಿಎಸ್‌ಐ ದಿವ್ಯಾಶೀರ್ವಾದದ ಸಭೆಯ ಜಾಯ್ ಪ್ರಿಯದರ್ಶಿನಿ, ಕಲ್ವಾರಿ ಎಜೆ ಚರ್ಚ್ ಫಾದರ್ ಜೋವೆಲ್ ನಾರಾಯಣ್, ಅದ್ಭುತ ಏಸು ಸಭೆಯ ಜೋಸೆಫ್ ನಾರಾಯಣ್, ಅರುಣೋದಯ ಯೇಸು ಚರ್ಚ್‌ನ ಸಭಾ ಪಾಲಕರಾದ ಜೆರುಬಾಬೀಲ್ ಮತ್ತು ವಿನ್ಸೆಂಟ್ ಅಮೂಲ್ ದಾಸ್, ನಗರಸಭಾ ಸದಸ್ಯ ಆನಂದ್, ಎಸ್‌ಡಿಎ ಚರ್ಚ್‌ನ ಸಭಾ ಹಿರಿಯರಾದ ಡಿ.ಸಾಮುಯಲ್, ಭಕ್ತರಾಜ್, ಸಾಲೋಮನ್, ಮುಖಂಡ ಮುಡಿಗುಂಡಿ ಶಾಂತರಾಜು ಇತರರಿದ್ದರು.