ಹೊಸಕೋಟೆ ತಾಲೂಕು ನಂದಗುಡಿ ಕೆಪಿಎಸ್​ನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಎಸ್​ಡಿಎಂಸಿ ಉಪಾಧ್ಯಕ್ಷ ಎನ್​.ಗಂಗಾಧರ್​, ಎಸ್​ಡಿಎಂಸಿ ಉಪಾಧ್ಯಕ್ಷ ಎನ್​.ಎಚ್​.ಅನಿಲ್​ಕುಮಾರ್​, ಭೂ ನ್ಯಾಯಮಂಡಳಿ ಸದಸ್ಯ ಪಿ.ವೀರರಾಜು, ಎಸ್​ಎಫ್​ಸಿಎಸ್​ನ ನಿರ್ದೇಶಕ ಎಂನಾಗೇಶ್​, ಪ್ರತಿನಿಧಿಗಳಾದ ಪುಷ್ಪಾವತಿ ಸಿ.ಮೂರ್ತಿ ಇತರರಿದ್ದರು. 
ರಾಜ್ಯ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಿ / NANDAGUDI

ನಂದಗುಡಿ : ಶಾಲಾ ಶಿಕ್ಷಣದ ಸಾರ್ವತ್ರೀಕರಣ ಬೇಡಿಕೆ ಸಾಕಾರಗೊಳ್ಳಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ನಿರ್ಣಾಯಕ ಪಾತ್ರವಹಿಸುತ್ತದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಉಳಿವಿನ ಕೀರ್ತಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಸಲ್ಲುತ್ತದೆ ಎಂದು ನಿಕಟಪೂರ್ವ ಎಸ್​ಡಿಎಂಸಿ ಉಪಾಧ್ಯಕ್ಷ ಎನ್​.ಗಂಗಾಧರ್​ ಹೇಳಿದರು.
ಕೆಪಿಎಸ್​ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಪಾಲಕರು ಒಂದೇ ದಿಕ್ಕಿನಲ್ಲಿ ವಿಚಾರ ಮಾಡಿದರೇ ಆ ಶಾಲೆ ನಂದನವಾಗುತ್ತದೆ. ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತಿದೆ. ಅಂತೆಯೇ ಪಾಲಕರು ಖಾಸಗಿ ಶಾಲೆ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಎಸ್​ಡಿಎಂಸಿ ಉಪಾಧ್ಯಕ್ಷ ಎನ್​.ಎಚ್​.ಅನಿಲ್​ಕುಮಾರ್​ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಲು ಸಾಧ್ಯ. ಪಾಲಕರು ಶಿಕ್ಷಕರಿಗೆ ಸಹಕಾರ ನೀಡಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬಹುದು. ಸರ್ಕಾರ ಯೋಜನೆಗಳನ್ನು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನೂರುದ್ದೀನ್​, ಫರ್ಹ ಸುಲ್ತಾನ, ಮುನಿರಾಜು, ಕನಕಮ್ಮ, ಅಂಜನಾ, ನಾಗರತ್ನಮ್ಮ, ದಿನೇಶ್​, ಎನ್​.ಟಿ.ಗಂಗಾಧರ್​, ಸುವರ್ಣಾ, ಶಾಲಿನಿ, ಬಾಬು, ನಾಗರಾಜು, ಗಿರೀಶ್​ಕುಮಾರ್​, ಪ್ರಾಂಶುಪಾಲ ಸೀನಪ್ಪ, ಉಪ ಪ್ರಾಂಶುಪಾಲ ಮುರಳಿ, ಮುಖ್ಯಶಿಕ್ಷಕಿ ಎಲ್​.ರಾಧಾ ಇತರರಿದ್ದರು.