ಜೀತಪದ್ಧತಿ ನಿಮೂರ್ಲನೆಗೆ ಸಹಕರಿಸಿ serfdom 
ರಾಜ್ಯ

ಜೀತಪದ್ಧತಿ ನಿಮೂರ್ಲನೆಗೆ ಸಹಕರಿಸಿ serfdom

ಪ್ರಮುಖ ಮುಖ್ಯಾಂಶಗಳು

  • ಜೆಎಂಎಫ್​ಸಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಜಿ. ಹರೀಶ್​ ಕರೆ
ಮುಳಬಾಗಿಲು: ಸರ್ಕಾರ ಹಲವು ವರ್ಷಗಳಿಂದ ಜೀತಮುಕ್ತ ಸಮಾಜ ನಿಮಾರ್ಣಕ್ಕೆ ಜಾಗೃತಿಗೊಳಿಸುವ ಕಾರ್ಯವನ್ನು ರೂಪಿಸಿದ್ದು, ಕಾನೂನು ಇಲಾಖೆ ಸಹ ಈ ಬಗ್ಗೆ ಅರಿವು ಕಾರ್ಯಕ್ರಮಗಳ ಮೂಲಕ ಸಮಾಜಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಕಾರ್ಯನಿರ್ವಹಿಸಿ ಜೀತಪದ್ಧತಿ ನಿಮೂರ್ಲನೆಗೆ ಸಹಕರಿಸಬೇಕು ಎಂದು ಜೆಎಂಎಫ್​ಸಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಜಿ. ಹರೀಶ್​ ತಿಳಿಸದರು.serfdom
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ ಜಂಟಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೀತಪದ್ಧತಿ ನಿಮೂರ್ಲನಾ ದಿನಾಚರಣೆಯಲ್ಲಿ ಮಾತನಾಡಿ, ಈ ಕಾಯ್ದೆ ಪ್ರಕಾರ ಉಲ್ಲಂಘನೆ ಮಾಡಿದವರಿಗೆ ಕನಿಷ್ಠ 3 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಆದುದರಿಂದ ಇಂತಹ ಅನಿಷ್ಟ ಪದ್ಧತಿಗೆ ಯಾರೂ ಮುಂದಾಗಬಾರದು ಎಂದು ಎಚ್ಚರಿಸಿದರು.
ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ಕೋಲಾರ ಜಿಲ್ಲೆ ಜೀತಮುಕ್ತ ಜಿಲ್ಲೆಯಾಗಿದ್ದು, ಮುಳಬಾಗಿಲು ತಾಲೂಕಿನ ಸಹ ಯಾವುದೇ ಪ್ರಕರಣ ಕಂಡುಬಂದಿಲ್ಲ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್​ಗಳು ಜೀತದಾಳುಗಳನ್ನು ಗುರುತಿಸಿ, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್​.ಸತೀಶ್​ ಕುಮಾರ್​ ಮಾತನಾಡಿ, ಜೀತಪದ್ಧತಿ ಮೇಲ್ನೋಟಕ್ಕೆ ನಿಮೂರ್ಲನೆಯಾದರೂ ಪರೋಕ್ಷವಾಗಿ ಉಲ್ಬಣಗೊಳ್ಳುತ್ತಿದೆ. ಕೋಳಿ ಫಾಮ್​ರ್ಗಳಲ್ಲಿ, ಕಲ್ಲು ಗಣಿಗಾರಿಕೆ, ಇಟ್ಟಿಗೆ ಕಾರ್ಖಾನೆಗಳು ಮತ್ತಿತರ ಕಡೆ ಬೇರೆ ಬೇರೆ ರಾಜ್ಯದವರನ್ನು ಕೆಲಸಕ್ಕೆ ಇಟ್ಟುಕೊಂಡು ವಾಸಿಸಲು ಯೋಗ್ಯವಲ್ಲದ ಮನೆ, ಆಹಾರ ಧಾನ್ಯಗಳು, ಬಿಡಿ ಸಿಗರೇಟ್​ ಮಧ್ಯ ಮತ್ತಿತರ ವಸ್ತುಗಳನ್ನು ನೀಡುವ ಮೂಲಕ ಪರೋಕ್ಷ ಜೀತಗಾರಿಕೆ ನಡೆಯುತ್ತಿದೆ. ಇವರಿಗೆ ಸ್ಥಳಿಯವಾಗಿ ನಕಲಿ ದಾಖಲೆ ಸೃಷ್ಟಿ ಮಾಡಿಕೊಡಲಾಗಿದೆ ಇಂಥ ಪ್ರಕರಣವನ್ನು ಕಾರ್ಮಿಕ ಇಲಾಖೆ, ಜಿಲ್ಲಾ ಮತ್ತು ತಾಲೂಕ ಆಡಳಿತ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್​. ಶ್ರೀನಿವಾಸರೆಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ಸಿ.ವಿ. ಶ್ರೀನಿವಾಸಪ್ಪ, ವಕೀಲ ಸಿ.ಸುಬ್ರಹ್ಮಣಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ಆರ್​. ರವಿಚಂದ್ರ, ಕಾರ್ಮಿಕ ನಿರೀಕ್ಷಿ ಆಶಾರಾಣಿ, ಸಿಡಿಪಿಒ ರಮ್ಯಾ ಇದ್ದರು.