ಸಾರ್ವಜನಿಕ ಗ್ರಾಮ ಸಭೆ Police 
ರಾಜ್ಯ

ನಶೆಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಿ Police

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಜಿಲ್ಲಾ ಉಪ ಆಯುಕ್ತೆ ಸೈಯದ್​ ಹಾಜಾಮತ್​ ಆಫ್ರಿನ್​ ಹೇಳಿಕೆ
ಶ್ರೀನಿವಾಸಪುರ: ಇತ್ತೀಚೆಗೆ ಗಾಂಜಾ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, Police ಇವುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಶೆಮುಕ್ತ ಜಿಲ್ಲೆ ಮಾಡಬೇಕೆಂಬುದು ನಮ್ಮ ಆಶಯವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತೆ ಸೈಯದ್​ ಹಾಜಾಮತ್​ ಆಫ್ರಿನ್​ ತಿಳಿಸಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಮಾದಕ ವಸ್ತುಗಳ ನಿಷೇಧ ಹಾಗೂ ಅರಿವು ಮೂಡಿಸುವ ಸಾರ್ವಜನಿಕ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಿಂದ ದೂರ ಇರಬೇಕು. ಇತ್ತೀಚೆಗೆ ಮಾಲೂರಿನಲ್ಲಿ ಎರಡು ಕೆ.ಜಿ ಚಾಕೊಲೇಟ್​ ಮಾದಕ ವಸ್ತುಗಳ ವ್ಯಾಪಾರ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುವುದು ಕಾನೂನು ಬಾಹಿರ. ಇವುಗಳ ಸುಳಿವು ಸಿಕ್ಕಿದ್ದಲ್ಲಿ ನಮ್ಮ ಇಲಾಖೆ ಗಮನಕ್ಕೆ ತರಬೇಕು ಎಂದರು.
ಕೋಳಿ ಫಾಮ್​ರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರ ರಾಜ್ಯಗಳಿಂದ ಆಗಮಿಸುವುದರಿಂದ ಇವುಗಳ ಮಾಲೀಕರು ಅವರ ಮೇಲೆ ನಿಗಾವಹಿಸುವುದನ್ನು ಮರೆಯಬಾರದು ಎಂದರು.
ಪಟ್ಟಣದ ಜಗಜೀವನ ಪಾಳ್ಯ ಕಟ್ಟೆ ಕೆಳಗಿನ ಪಾಳ್ಯ ಬೊಂಬು ಬಜಾರ್​ ಇಂದ್ರಾನಗರ ಹಲವು ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಲಾಗಿದೆ ಎಂದರು.
ಮುಖಂಡ ಗಣೇಶ್​, ತಾಪಂ ಮಾಜಿ ಅಧ್ಯಕ್ಷ ಗುರಪ್ಪ, ಗ್ರಾಪಂ ಸದಸ್ಯ ಗುರಪ್ಪ, ವೆಂಕಟರಮಣ ಇದ್ದರು.
ಅಂಗಡಿಗಳಲ್ಲಿ ಮಾರಾಟಕ್ಕೆ ಬ್ರೇಕ್​ ಹಾಕಿ: ಶಿವಪುರದಲ್ಲಿ ಕೆಲ ಅಂಗಡಿಗಳಿದ್ದು, ಅಲ್ಲಲ್ಲಿ ಮದ್ಯದ ಪಾಕೆಟ್ಟುಗಳ ಮಾರಾಟ ಹೆಚ್ಚಾಗುತ್ತಿದೆ. ಇದರ ಬಗ್ಗೆ ಈಗಾಗಲೇ ನಾವು ಗ್ರಾಮದಲ್ಲಿ ತಿಳಿವಳಿಕೆ ನೀಡಿದ್ದೇವೆ ಆದರೂ ಮಾರಾಟ ಮುಂದುವರೆದಿದೆ. ವೈನ್​ ಶಾಪ್​ಗಳಿಗೆ ನಿಮ್ಮ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಶಾಪ್​ಗಳಲ್ಲಿ ಅಧಿಕವಾಗಿ ಒಬ್ಬರಿಗೆ ಹೆಚ್ಚು ಪ್ಯಾಕೇಟ್​ಗಳನ್ನು ನೀಡುವುದನ್ನು ನಿಯಂತ್ರಿಸಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದಲ್ಲಿ ಮಾದಕ ವಸ್ತುಗಳ ನಿಷೇಧ ಹಾಗೂ ಅರಿವು ಮೂಡಿಸುವ ಸಾರ್ವಜನಿಕ ಗ್ರಾಮ ಸಭೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಶ್ರೀನಿವಾಸ ಮೂರ್ತಿ, ನಿರೀಕ್ಷಕರಾದ ಪುಷ್ಪಾ, ರಮಾಮಣಿ, ಶಶಿಕಲಾ, ಮುನಿರತ್ನಮ್ಮ ರವೀಂದ್ರ, ಬಾಲಕೃಷ್ಣ, ಗಿರೀಶ್​ ಬಾಬು, ನಾಗರಾಜ್​ ಇದ್ದರು.