ಮರಗೊಂಡನಹಳ್ಳಿ ಶ್ರೀ ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಶಿವನುಭವ ಗೋಷ್ಠಿಯಲ್ಲಿ ಶ್ರೀ ಇಮ್ಮಡಿ ಮಹಾಂತ ಸ್ವಾಮೀಜಿ ಮಾತನಾಡಿದರು.
- ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ
- ಜಾವಗಲ್ ಹೋಬಳಿಯ ಮಾರಗೊಂಡನಹಳ್ಳಿ
ಅರಸೀಕೆರೆ ಗ್ರಾಮಾಂತರ: ಎಲ್ಲರೂ ಇಷ್ಟಲಿಂಗ ಧರಿಸಿ ಶಿವಚರಣರ ವಚನಗಳನ್ನು ಪಠಿಸುವ ಮೂಲಕ ಅದರಂತೆ ಆಚರಣೆ ಮಾಡಬೇಕಿದೆ ಎಂದು ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಜಾವಗಲ್ ಹೋಬಳಿಯ ಮಾರಗೊಂಡನಹಳ್ಳಿಯ ಶ್ರೀ ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಶಿವನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪರಂಪರೆಯ ಆಚರಣೆ ಮತ್ತು ಸಂಸ್ಕಾರಗಳನ್ನು ನಾವು ಮನೆಯಲ್ಲಿ ಆಚರಿಸುವುದರ ಜತೆಗೆ ನಮ್ಮ ಮಕ್ಕಳಿಗೂ ಕಲಿಸಿಕೊಡುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ಶಿವಕುಮಾರಪುರದ ಶ್ರೀ ಇಮ್ಮಡಿ ಮಹಾಂತ ಸ್ವಾಮೀಜಿ, ಶರಣ ಡಿಗ್ಗೇನಹಳ್ಳಿ ಹಾಲಪ್ಪ, ನಿವೃತ ಶಿಕ್ಷಕ ಮಲ್ಲಿಕಾರ್ಜುನ್, ಗುರುಮೂರ್ತಿ, ಕುಮಾರಸ್ವಾಮಿ ಇದ್ದರು.