ಖನಗಾಂವ ಆದರ್ಶ ಕನ್ನಡ ಮಾಧ್ಯಮ ಶಾಲೆಯ ಸ್ನೇಹ ಸಮ್ಮೇಳನದಲ್ಲಿ ಕುಮಾರ ಸ್ವಾಮೀಜಿ, ಪುಂಡಲೀಕ ವಣ್ಣೂರ, ರಾಜೇಶ್ವರಿ ಈರನಟ್ಟಿ ಇತರರಿದ್ದರು. 
ರಾಜ್ಯ

ನಿರಂತರ ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಮಮದಾಪುರ
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಮಕ್ಕಳನ್ನು ಒಳ್ಳೆಯ ಪ್ರಜೆಯನ್ನಾಗಿಸುವ ಜತೆಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ, ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಶಿಕರು ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳು ಟಿವಿ, ಮೊಬೈಲ್​ ಗೀಳು ತೊರೆದು ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಾಲೆ ಅಭಿವೃದ್ಧಿಗೆ 50,000 ರೂ. ದೇಣಿಗೆ ನೀಡಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ ಅಶೋಕ ತೋಟಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ಸಂಸ್ಥೆಯ ಅಧ್ಯ ಪುಂಡಲೀಕ ವಣ್ಣೂರ, ಉಪಾಧ್ಯ ಶ್ರೀಕಾಂತ ಸುತಗಟ್ಟಿ, ಡಾ.ಡಿ.ಜಿ.ಚೌಗಲಾ, ಉಪ ಅರಣ್ಯ ಸಂರಣಾಧಿಕಾರಿ ರಾಜೇಶ್ವರಿ ಈರನಟ್ಟಿ, ಸಿಆರ್​ಪಿ ನಾಗೇಶ ತಳವಾರ, ಮುಖಂಡರಾದ ಸಿದ್ದಪ್ಪ ದೇಸಾಯಿ, ಶಿವಾನಂದ ಪಾಟೀಲ, ಖನ್ನಪ್ಪ ಗುಡದನ್ನವರ, ಮಹೇಶ ರಾಮಾಪುರಿ, ಮುಖ್ಯಶಿಕಿ ಶಾಂಭವಿ ವಣ್ಣೂರ ಹಾಗೂ ಶಿಕರು ಇದ್ದರು. ಬೆಳ್ಳಪ್ಪ ಬಡಿಗೇರ ಸ್ವಾಗತಿಸಿದರು. ಭಾರತಿ ಕಡಿ ನಿರೂಪಿಸಿದರು. ನಿರೂಪಮಾ ಗುರುವನ್ನವರ ವಂದಿಸಿದರು.