ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮ ಹತ್ತಿರದ ರಘುನಾಥ ಕಾಳೆ ಅವರ ಸೋಯಾಬಿನ್​, ತೊಗರಿ ಹೊಲವನ್ನು ಬರ ಅಧ್ಯಯನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವೀಕ್ಷಿಸಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶಮಾರ್, ಜಿಪಂ ಸಿಇಒ ಗಿರೀಶ್​ ಬದೋಲೆ, ಜಂಟಿ ನಿರ್ದೇಶಕಿ ದೇವಿಕಾ.ಆರ್​., ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ, ಇಒ ಹಣಮಂತರಾಯ ಕೌಟಗೆ, ಕೃಷಿ ಅಧಿಕಾರಿ ಶತ್ರುಘ್ನ, ಸ್ವಾತಿ ಇತರರಿದ್ದರು. 
ರಾಜ್ಯ

ಬರಗಾಲ ಘೋಷಣೆಗೆ ಸಮಾಲೋಚನೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಈಶ್ವರ ಖಂಡ್ರೆ ಭರವಸೆ
  • ಹೊಳಸಮುದ್ರದಲ್ಲಿ ಬೆಳೆ ವೀಕ್ಷಣೆ
  • ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ
ಕಮಲನಗರ: ಜಿಲ್ಲೆಯ ವಿವಿಧ ತಾಲೂಕುಗಳ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದ್ದೇನೆ. ರೈತರೊಂದಿಗೆ ಚರ್ಚಿಸಿದ್ದೇನೆ. ತೇವಾಂಶ ಕೊರತೆಯಿಂದ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಪ್ರತಿಶತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಶೀಘ್ರವೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಬರ ಪರಪರಸ್ಥಿತಿಯ ವರದಿ ಸಲ್ಲಿಸಲಾಗುವುದು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುತ್ತದೆ ಎಂದು ಬರ ಅಧ್ಯಯನ ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಮಂಗಳವಾರ ತಾಲೂಕಿನ ಹೊಳಸಮುದ್ರ ಗ್ರಾಮ ಹತ್ತಿರದ ರಘುನಾಥ ಕಾಳೆ ಎನ್ನುವವರ ಸೋಯಾಬಿನ್​, ತೊಗರಿ ಹೊಲ ವೀಕ್ಷಣೆ ಮಾಡಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರೊಂದಿಗೆ ಚರ್ಚಿಸಿ ಮಾತನಾಡಿದರು. ರೈತರ ಪರಿಸ್ಥಿತಿ ಆಲಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಮೊದಲ ಸಂಪುಟದಲ್ಲೇ ಎಲ್ಲ ಸಚಿವರಿಗೆ ಸೂಚನೆ ನೀಡಿದ್ದು, ಸರ್ಕಾರ ರೈತರ ಮನೆ ಬಾಗಿಲಿಗೆ ತೆರಳಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶಮಾರ್, ಜಿಪಂ ಸಿಇಒ ಗಿರೀಶ್​ ಬದೋಲೆ, ಜಂಟಿ ನಿರ್ದೇಶಕಿ ದೇವಿಕಾ.ಆರ್​., ಮಾರ್ತಂಡ, ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ, ಇಒ ಹಣಮಂತರಾಯ ಕೌಟಗೆ, ಕೃಷಿ ಅಧಿಕಾರಿ ಶತ್ರುಘ್ನ, ಸ್ವಾತಿ, ಅಂಬಿಕಾ, ಪಿಡಿಒ ಮಹಾದೇವ ಗಾಯಕವಾಡ್​, ಸುರೇಶ ದಿನಕರ್​, ಹಣಮಂತರಾವ ಚವ್ಹಾಣ್​, ಸಂತೋಷ ಬಿರಾದಾರ, ಪ್ರವಿಣ ಪಾಟೀಲ, ಉಮಾಕಾಂತ ಪಾಟೀಲ, ಶಾಂತಕುಮಾರ ಬಿರಾದಾರ ವಿವಿಧ ಇಲಾಖೆೆಯ ಅಧಿಕಾರಿ,ಗ್ರಾಮಸ್ಥರು ಇದ್ದರು.