ಬಾದಾಮಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇ ಮಹಡಿ ಭೂಮಿಪೂಜಾ ಕಾರ್ಯಕ್ರಮವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೆರವೇರಿಸಿದರು. ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರ, ಶಿವಕುಮಾರ್ ಹಿರೇಮಠ, ಮಂಜುನಾಥ ಹೊಸಮನಿ, ಶಂಕರ ಕನಕಗಿರಿ ಇತರರಿದ್ದರು.
- ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿಕೆ
- ಸರ್ಕಾರಿ ಕಾಲೇಜಿನ 2ನೇ ಮಹಡಿ ಭೂಮಿಪೂಜೆ
ಬಾದಾಮಿ: ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 160.51 ಲಕ್ಷ ರೂ. ಅನುದಾನದಲ್ಲಿ ಎರಡನೇ ಮಹಡಿ ಭೂಮಿಪೂಜಾ ಕಾರ್ಯಕ್ರಮವನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಶಿಕ್ಷಣ ಆರೋಗ್ಯ ಸೇರಿ ಮೂಲ ಸೌಕರ್ಯಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಪ್ರಮುಖ ಬೇಡಿಕೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಎಸ್.ಬಿ. ಬೊಮ್ಮನ್ನವರ, ಕಾಲೇಜ್ ಸಮಿತಿ ಸದಸ್ಯರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಹೊಸಮನಿ, ಮಾಜಿ ಸದಸ್ಯ ಶಂಕರ ಕನಕಗಿರಿ, ಭೀಮಶಿ ಕಮ್ಮಾರ, ಹನಮಂತ ಜೋಗಿನ, ಶಿವಕುಮಾರ್ ಚೋಳನ್ನವರ, ಎಂ.ಐ. ಬಾರಾವಲಿ ಸೇರಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.