Construction of stadiums in every village
ಬರಗೂರು: ಕ್ರಿಕೆಟ್ ಕೇವಲ ಆಟವಲ್ಲ, ಅದು ಯುವ ಜನತೆಯನ್ನು ಒಗ್ಗೂಡಿಸುವ ಶಕ್ತಿ. ಶಿಸ್ತು ಮತ್ತು ಕ್ರೀಡಾ ಸ್ಫೂರ್ತಿ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ 2ರಿಂದ 5 ಎಕರೆ ಕ್ರೀಡಾಂಗಣವನ್ನು ನಿಮಾರ್ಣ ಮಾಡಿ ಯುವಕರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಚಿದಾನಂದ.ಎಂ.ಗೌಡ ತಿಳಿಸಿದರು.
ಶಿರಾ ತಾಲೂಕಿನ ಮದ್ದಕ್ಕನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಸಿಎಂಜಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಯುವಕರಲ್ಲಿ ಅಪಾರವಾದ ಪ್ರತಿಭೆಯಿದೆ. ಅವರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಡುವುದು ನಮ್ಮ ಉದ್ದೇಶ ಎಂದರು.
ಗ್ರಾಪಂ ಮಟ್ಟದ ವಿಜೇತರಿಗೆ ಪ್ರಥಮ ಬಹುಮಾನ 11 ಸಾವಿರ ರೂ., ದ್ವೀತಿಯ ಬಹುಮಾನ 5,500 ರೂಪಾಯಿ, ಹೋಬಳಿಯಿಂದ ತಾಲೂಕು ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ವಿಜೇತರಿಗೆ ಒಂದು ಲಕ್ಷ ಪ್ರಥಮ ಬಹುಮಾನ, ದ್ವೀತಿಯ ಬಹುಮಾನ 55 ಸಾವಿರ ರೂ. ನೀಡಲಾಗುವುದು ಎಂದರು.
ಕ್ರೀಡಾಪಟುಗಳಿಗೆ ಎಂಎಲ್ಸಿ ಚಿದಾನಂದ ಎಂ ಗೌಡ ಉಚಿತ ಟೀ&ಶರ್ಟ್ ವಿತರಿಸಿದರು. ಒಬಿಸಿ ಅಧ್ಯಕ್ಷ ಗೌಡಪ್ಪ, ಬೀರೇಶ್ವರ ಕ್ರೆಡಿಟ್ ಕೋ -ಆಪರೇಟೀವ್ ನಿರ್ದೇಶಕ ಹಾಗೂ ಯುವ ಮುಖಂಡ ಮದ್ದಕ್ಕನಹಳ್ಳಿ ರಂಗನಾಥ್, ಮಹಿಳಾ ಮೋರ್ಛಾ ಕಾರ್ಯದರ್ಶಿ ಚಂದ್ರಕಲಾ, ತಾವರೆಕೆರೆ ಗ್ರಾಪಂ ಸದಸ್ಯ ಸ್ನೇಹಪ್ರಿಯ ಶಿವು, ರಾಜ್ಯ ಕಾರ್ಯಕಾರಿಣಿ ಸದಸ್ಯ ಬರಗೂರು ಶಿವಕುಮಾರ್, ತಾಲೂಕು ಗ್ರಾಮಾಂತರ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ಉಪಾಧ್ಯಕ್ಷ ನಾಗರಾಜ್ ಗೌಡ ಇದ್ದರು.