5 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ 
ರಾಜ್ಯ

5 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ

ಮಡಿವಾಳ : ಸಣ್ಣ ನೀರಾವರಿ ಇಲಾಖೆಯ ಎತ್ತಿನಹೊಳೆ ಯೋಜನೆಯಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ತಾಲೂಕಿಗೆ 25 ಕೋಟಿ ರೂ. ಅನುದಾನ ನೀಡಿದ್ದು, ತಾಲೂಕಿನ ಕಲ್ಯಾಣಿ, ರಾಜಕಾಲುವೆ, ಚೆಕ್​ಡ್ಯಾಂ, ತಡೆಗೋಡೆ ಅಭಿವೃದ್ಧಿಗೆ ಅನುದಾನ ನೀಡಿದ್ದು, ಅದರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಗರದ ದೊಡ್ಡ ಕೆರೆಯ ರಾಜಕಾಲುವೆ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. crore
ಮಾಲೂರು ತಾಲೂಕು ಮಡಿವಾಳ ತಿರುವು ಬಳಿಯ ದೊಡ್ಡಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಎತ್ತಿನಹೊಳೆ ಯೋಜನೆಯ 5 ಕೋಟಿ ರೂ. ವೆಚ್ಚದ ರಾಜಕಾಲುವೆ ಸೇರಿ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿನ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಯೋಜನೆ ಅಡಿ 2,500 ಕೋಟಿ ರೂ. ಕ್ಷೇತ್ರಕ್ಕೆ ನೀಡಿದ್ದು, ಅಭಿವೃದ್ಧಿಯಾಗಿರುವ ಕಾಮಗಾರಿಗಳು ಹಾಗೂ ಶಂಕುಸ್ಥಾಪನೆಯಾಗುವ ಕಾಮಗಾರಿಗಳ ಚಾಲನೆಯನ್ನು ನೀಡಲು ಹಾಗೂ ಫಲಾನುಭವಿಗಳ ಸಮಾವೇಶ ಹಕ್ಕುಪತ್ರ ವಿತರಿಸಲು ಏ.1ರಂದು ತಾಲೂಕಿಗೆ ಆಗಮಿಸಲು ದಿನಾಂಕ ನೀಡಿದ್ದಾರೆ ಎಂದರು.
ಮಾಜಿ ಸದಸ್ಯರಾದ ಎ.ರಾಜಪ್ಪ, ಮುರಳೀಧರ್​, ಪದ್ಮಾವತಿ, ಇಮ್ತಿಯಾಜ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಬಿ.ಆರ್​.ಶ್ರೀನಿವಾಸ್​, ಮುಖಂಡ ಮಾದನಹಟ್ಟಿ ರವಿ, ಗುತ್ತಿಗೆದಾರ ವೆಂಕಟೇಶ್​, ಸಿಪಿಐ ರಾಮಪ್ಪ ಗುತ್ತೇರ್​ ಇದ್ದರು.