ಚನ್ನರಾಯಸ್ವಾಮಿ ಭವನ ನಿರ್ಮಾಣಕ್ಕೆ ಚಾಲನೆ Channarayaswamy 
ರಾಜ್ಯ

ಚನ್ನರಾಯಸ್ವಾಮಿ ಭವನ ನಿರ್ಮಾಣಕ್ಕೆ ಚಾಲನೆ Channarayaswamy

ಟೇಕಲ್​: ಮಾಲೂರು ತಾಲೂಕಿನ ಟೇಕಲ್​ ಹೋಬಳಿಯ ಕೊಮ್ಮನಹಳ್ಳಿಯಲ್ಲಿ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ, ಶಾಸಕ ಕೆ.ವೈ.ನಂಜೇಗೌಡ ಭೂಮಿಪೂಜೆ ಸಲ್ಲಿಸಿದರು. Channarayaswamy
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಶ್ರೀಚನ್ನರಾಯಸ್ವಾಮಿ ದೇವಾಲಯವು ಪುರಾತನಕಾಲದ್ದಾಗಿದೆ. ಇಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇತ್ತು, ಅದರಂತೆ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಮಗಾರಿಗೆ ಚಾಲನೆ ನೀಡಿರುವುದು ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆಯಾಗಿದೆ. ಸಮುದಾಯ ಭವನ ನಿಮಾರ್ಣವು ಗ್ರಾಮಸ್ಥರ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸತಿ ಚಟುವಟಿಕೆಗಳಿಗೆ ಕೇಂದ್ರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಹಸೀಲ್ದಾರ್​ ರೂಪಾ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಲಿಂಗಾಪುರ ಕಿಟ್ಟಿ, ದರಖಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಕ್ಷೇತ್ರನಹಳ್ಳಿ ವೆಂಕಟೇಶ್​ ಗೌಡ, ಈರೇಗೌಡ, ರಮೇಶ್​ ಗೌಡ, ನಾರಾಯಣಸ್ವಾಮಿ ಇತರರಿದ್ದರು.