ಇಂಡಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿದರು. ಅಣ್ಣುಗೌಡ ಪಾಟೀಲ, ವಿ.ಹೆಚ್. ಬಿರಾದಾರ, ಶಂಕರಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ ಇತರರಿದ್ದರು. 
ರಾಜ್ಯ

ದಿ.ದಾದಾಗೌಡ ಪಾಟೀಲರ ಪುತ್ಥಳಿ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿಕೆ
  • 2028ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ
ಇಂಡಿ: ದಿ. ದಾದಾಗೌಡ ಪಾಟೀಲರ ಪುತ್ಥಳಿಯನ್ನು ಇನ್ನೆರಡು ತಿಂಗಳಲ್ಲಿ ದಿ. ದಾದಾಗೌಡ ಪಾಟೀಲರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದಾದಾಗೌಡರು ನನ್ನ ರಾಜಕೀಯ ಗುರುಗಳಾಗಿದ್ದರು. ನನ್ನನ್ನು ಮೊದಲನೇ ಬಾರಿಗೆ ಇಂಡಿ ನಗರಕ್ಕೆ ಕರೆತಂದು ಶಾಸಕನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಇಂಡಿಯನ್ನು ಜಿಲ್ಲೆ ಮಾಡಿಯೇ 2028ರ ಚುನಾವಣೆ ಎದುರಿಸುತ್ತೇನೆ ಎಂದು ಘೋಷಣೆ ಮಾಡಿದ್ದರು. ಇದೀಗ ಜಿಲ್ಲಾ ಕೂಗು ಮಂಕಾಗಿ ಸಚಿವ ಸ್ಥಾನದ ಕೂಗು ಹೆಚ್ಚಿಸಿದ್ದಾರೆ. ಜನರನ್ನು ಮರಳು ಮಾಡಲು ಹೇಳಿಕೆ ಕೊಡುವುದನ್ನು ಬಿಟ್ಟು ಕ್ಷೇತ್ರದಲ್ಲಿನ ಹಾಳಾದ ರಸ್ತೆಗಳ ದುರಸ್ತಿ ಮಾಡುವತ್ತ ಗಮನ ಹರಿಸಬೇಕು. ಕೇವಲ ಸಚಿವ ಸ್ಥಾನದ ಲಾಬಿ ನಡೆಯುತ್ತಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
ನಾನು 2028ರಲ್ಲಿ ಕೊನೆ ಬಾರಿಗೆ ಸ್ಪರ್ಧೆ ಮಾಡಲಿದ್ದೇನೆ. ಗೆಲುವು-ಸೋಲು ಯಾವುದೇ ಆದರೂ ಮುಂದೆ ರಾಜಕೀಯ ನಿವೃತ್ತಿ ಹೊಂದಲಿದ್ದೇನೆ ಎಂದು ಘೋಷಿಸಿದರು.
ಯಶವಂತರಾಯಗೌಡ ಪಾಟೀಲರು ರಾಜಕಾರಣಕ್ಕಾಗಿ ಜಾತಿ-ಜಾತಿಗಳ ಮಧ್ಯೆ ಕಲಹ ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ. ನಾನು ಶಾಸಕನಾದಾಗಿನಿಂದ ಇಲ್ಲಿಯವರೆಗೂ ಜಾತೀಯತೆ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.
ಅಣ್ಣುಗೌಡ ಪಾಟೀಲ, ವಿ.ಎಚ್. ಬಿರಾದಾರ, ಶಂಕರಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಸಿಕಂದರ್ ಬೋರಾಮಣಿ, ಜಗನ್ನಾಥ ಇಂಡಿ, ಶಂಕರ ಬೋರಾಮಣಿ, ಮಲ್ಲು ಕಾಮಾ, ಮಲ್ಲಿಕಾರ್ಜುನ ಶಿವಪೂರ, ಈರಣ್ಣ ಡೆಂಗಿ, ಸಾಯಬಣ್ಣ ಹೊಟಗಿ, ಸುಭಾಸ ಕ್ಷತ್ರಿ, ಬಾಪುಗೌಡ ಪಾಟೀಲ, ಬುಡ್ಡೇಸಾಬ ಮುಲ್ಲಾ, ಕಲ್ಲಪ್ಪ ಘಂಟಿ ಇತರರಿದ್ದರು.