ಗುರುಮಠಕಲ್ ತಾಲೂಕಿನ ಸೈದಾಪುರ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಶಾಸಕ ಶರಣಗೌಡ ಕಂದಕೂರ ಕ್ರೀಡಾ ಜ್ಯೋತಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಽಕಾರಿ ವೀರಪ್ಪ ಕನ್ನೆಳ್ಳಿ, ಭೀಮಣ್ಣಗೌಡ ಕ್ಯಾತ್ನಾಳ, ಯೋಗೇಶ ಕುಮಾರ ಧೋಕಾ, ಗುರುನಾಥರೆಡ್ಡಿ ಗೌಡ ಇತರರಿದ್ದರು. 
ರಾಜ್ಯ

ಸೈದಾಪುರದಲ್ಲಿ ಕ್ರೀಡಾಂಗಣ ನಿರ್ಮಾಣ ಶೀಘ್ರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಭರವಸೆ
  • ಸೈದಾಪುರದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಗುರುಮಠಕಲ್: ಈ ಭಾಗದ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸೈದಾಪುರದಲ್ಲಿ ಶೀಘ್ರ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಸೈದಾಪುರ ಪಟ್ಟಣದ ಡಿಡಿಯು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆ ಅಽಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪಟ್ಟಣದ ಸುತ್ತಮುತ್ತ ಕನಿಷ್ಟ ಮೂರು ಎಕರೆ ಸರ್ಕಾರಿ ಜಮೀನು ಗುರುತಿಸಿ ಶೀಘ್ರ ಕ್ರೀಡಾಂಗಣ ನಿರ್ಮಾಣಕ್ಕೆ ತಾವು ಕೂಡ ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಮಕ್ಕಳನ್ನು ಕ್ರೀಡೆಯತ್ತ ಸೆಳೆಯಲು ಸರ್ಕಾರ ಪ್ರತಿವರ್ಷ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು. ಕ್ಷೇತ್ರ ಶಿಕ್ಷಣಾಽಕಾರಿ ವೀರಪ್ಪ ಕನ್ನೆಳ್ಳಿ ಮಾತನಾಡಿ, ಈ ಭಾಗದ ೩೫ ಸರ್ಕಾರಿ ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಿಸಲು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ವೇಳೆ ಶರಣೀಕ ಕುಮಾರ ದೋಕಾ, ಭೀಮಣ್ಣಗೌಡ ಕ್ಯಾತ್ನಾಳ, ಯೋಗೇಶ ಕುಮಾರ ಧೋಕಾ, ಗುರುನಾಥರೆಡ್ಡಿ ಗೌಡ, ಚಂದ್ರುಗೌಡ, ರಾಜು ಉಡುಪಿ, ಪರಮೇಶ ವಾರದ, ಚಂದ್ರು ಗೌಡ ಹೆಗ್ಗಣಗೇರಾ, ತಾಯಪ್ಪ ಬಂದೆಪಲ್ಲಿ, ಮರೆಪ್ಪ ನಟೇಕಾರ ಆನಂದ ಮೀರಿಯಲ್, ಚಂದುಗೌಡ, ಲಕ್ಷ÷್ಮಣ್ ನಾಯಕ, ಮಲ್ಲೇಶಿ ನಾಯಕ, ಶಿವು ಗೌಡ ಸೈದಾಪುರ, ಅಲಾವುದ್ದಿನ ನೀಲಹಳ್ಳಿ, ಸಾಹೇಬಗೌಡಗೌಡಗೇರಾ, ಬಸವರಾಜ ಹಿರೇನೋರ, ಬಸವರೆಡ್ಡಿ ಹೆಗ್ಗಣಗೇರಾ ಇತರರಿದ್ದರು.