ಅರಕಲಗೂಡು ಪಟ್ಟಣದ ಎಪಿಎಂಸಿ ಆವರಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾ ಶಾಸಕ ಎ.ಮಂಜು ಭೂಮಿಪೂಜೆ ನೆರವೇರಿಸಿದರು. ನರಸೇಗೌಡ, ದಿವಾಕರ್, ಪುಟ್ಟರಾಜು ಇತರರಿದ್ದರು.
- ಒಂದು ಕೋಟಿ ರೂ.ವೆಚ್ಚ
- ಎಪಿಎಂಸಿ ಆವರಣ
ಅರಕಲಗೂಡು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಾಸಕ ಎ.ಮಂಜು ಭೂಮಿಪೂಜೆ ನೆರವೇರಿಸಿದರು.
ರೈತರ ಬೆಳೆಯನ್ನು ದಲ್ಲಾಳಿ ಅಥವಾ ಮಧ್ಯವರ್ತಿಗಳ ಹಾವಳಿಗೆ ತುತ್ತಾಗದಂತೆ ನೇರವಾಗಿ ಎಪಿಎಂಸಿ ಮೂಲಕ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಎಪಿಎಂಸಿ ಆವರಣದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಕೃಷಿ ಉತ್ಪನ್ನ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಕೃಷಿ ಉತ್ಪನ್ನ ಮಾರುಕಟ್ಟೆ ಹೊಳೆನರಸೀಪುರದಲ್ಲಿದ್ದು ಅದನ್ನು ವಿಭಜಿಸಲಾಯಿತು ಎಂದರು.
ಎಪಿಎಂಸಿ ಮುಂಭಾಗ ಲಾರಿಗಳನ್ನು ನಿಲ್ಲಿಸುವ ಉದ್ದೇಶದಿಂದ ಆರು ತಿಂಗಳೊಳಗಾಗಿ ಎರಡು ಕೋಟಿ ರೂ.ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಮುಖಂಡರಾದ ನರಸೇಗೌಡ, ಕೃಷ್ಣೇಗೌಡ, ದಿವಾಕರ್, ಪುಟ್ಟರಾಜು, ಉಪೇಂದ್ರ, ವೀರಣ್ಣ, ಸೋಮಶೇಖರ್ ಇತರರಿದ್ದರು.