Construction of a high-class stadium 
ರಾಜ್ಯ

ಉನ್ನತ ದರ್ಜೆಯಲ್ಲಿ ಕ್ರೀಡಾಂಗಣ ನಿರ್ಮಾಣ

ತುಮಕೂರು ಡೆಸ್ಕ್
ತುರುವೇಕೆರೆ: ತಾಲೂಕಿನ ಕ್ರೀಡಾಪಟುಗಳು ತರಬೇತಿ ಪಡೆಯಲು ಪಟ್ಟಣದ ಕ್ರೀಡಾಂಗಣವನ್ನು ಉನ್ನತ ದರ್ಜೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಪಟ್ಟಣ ಪಂಚಾಯತಿಯಿಂದ 22 ಲಕ್ಷ ರೂ. ವೆಚ್ಚದಲ್ಲಿ ಒಪನ್​ ಜಿಮ್​ ಯಂತ್ರೋಪಕರಣ ಹಾಗೂ ಹೈಮಾಸ್ಟ್​ ದೀಪ ಅಳವಡಿಕೆ ಕಾಮಾಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಒಳ ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ತಾಲೂಕಿನ ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಕ್ರಿಕೆಟ್​ ಸೇರಿದಂತೆ ಹಲವು ಕ್ರೀಡೆಯಲ್ಲಿ ಯುವಕರು ತೊಡಗಿಕೊಳ್ಳಬೇಕು. ಜನರು ಬೆಳಗ್ಗೆ, ಸಂಜೆ ವಾಕಿಂಗ್​ ಮಾಡಲಿದ್ದು, ಅವರಿಗೆ ಉತ್ತಮ ಪರಿಸರ ನಿಮಾರ್ಣ ಮಾಡಬೇಕಿದೆ. ಪಪಂ ವತಿಯಿಂದ ವಾಕಿಂಗ್​ ಮಾಡುವ ಜನರಿಗಾಗಿ ಜಿಮ್​ ಮಾಡಲು ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ರಾತ್ರಿ ಸಮಯದಲ್ಲಿ ಮದ್ಯವ್ಯಸನಿಗಳು ಕಂಡು ಬಂದರೆ ಕೂಡಲೇ ಪೋಲೀರಿಗೆ ದೂರು ನೀಡಬೇಕು ಎಂದು ಸೂಚಿಸಿದರು.
ಪಟ್ಟಣದ ಕಸ ವಿಲೇವಾರಿ ವಾಹನಗಳಿಗೆ ಶಾಸಕರು ಚಾಲನೆ ನೀಡಿದರು.