28.3 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ. ಮೇಲ್ಸೇತುವೆ ನಿರ್ಮಾಣ flyove 
ರಾಜ್ಯ

28.3 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ. ಮೇಲ್ಸೇತುವೆ ನಿರ್ಮಾಣ flyove

ಪ್ರಮುಖ ಮುಖ್ಯಾಂಶಗಳು

  • ಸಂಸದ ಮಲ್ಲೇಶ್​ ಬಾಬು ಹೇಳಿಕೆ
  • ನರಸಾಪುರ&ಬೆಳ್ಳೂರು ಹೆದ್ದಾರಿ ಲೋಕಾರ್ಪಣೆ
ನರಸಾಪುರ: ನರಸಾಪುರ ಮತ್ತು ಬೆಳ್ಳೂರು ಕೈಗಾರಿಕಾ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಕೈಗಾರಿಕೆ ಪ್ರದೇಶದಲ್ಲಿ 28.3 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ. ಮೇಲ್ಸೇತುವೆ ನಿರ್ಮಿಸಲಾಗಿದೆ. ಸದ್ಯಕ್ಕೆ ಒಂದು ಕಡೆ ಸಂಚರಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ತಿಂಗಳಲ್ಲಿ ಎರಡೂ ಬದಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಂಸದ ಮಲ್ಲೇಶ್​ ಬಾಬು ತಿಳಿಸಿದರು. flyover
ನರಸಾಪುರ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಮತ್ತು ಬೆಳ್ಳೂರು ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮುಂದಿನ ರಸ್ತೆಯನ್ನು ಉದ್ಘಾಟನೆ ಮಾಡುವಾಗ ಜಿಲ್ಲಾಧಿಕಾರಿಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳನ್ನು ಕರೆದು ಕಾರ್ಯಕ್ರಮ ಮಾಡಲಾಗುವುದು. ಜ.30ರೊಳಗೆ ವಡಗೂರು ಮತ್ತು ತಂಬಳ್ಳಿ ರಸ್ತೆ ಕಾಮಗಾರಿ ಮುಗಿಯುತ್ತದೆ. ಫೆಬ್ರವರಿ ಅಂತ್ಯದೊಳಗೆ ನರಸಿಂಹತೀರ್ಥ ಮತ್ತು ಒಡ್ಡಳ್ಳಿ ಸೇತುವೆ ಕಾಮಗಾರಿ ಮುಗಿಯುತ್ತದೆ. ಜಿಲ್ಲಾ ಕೇಂದ್ರದಿಂದ ರಾಜ್ಯ ರಾಜಧಾನಿ ಬೆಂಗಳೂರು&ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಲು ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿದೆ ಎಂದರು.
ಈಗಾಗಲೇ ಕೋಲಾರದಿಂದ ಬೆಂಗಳೂರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಹೊಸ ಮಾರ್ಗದ ರೈಲಿಗೆ ಸಮೀಕ್ಷೆಯಾಗಿ ಸರ್ವೇ ಕಾರ್ಯ ಮುಗಿದಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ಕೋಲಾರದಿಂದ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣ ನಿಮಿತ್ತ ಸಾವಿರಾರು ಮಂದಿ ನಿತ್ಯ ಪ್ರಯಾಣ ಮಾಡುತ್ತಾರೆ. ನೇರ ರೈಲು ಸೇವೆ ಇಲ್ಲದ ಕಾರಣ ಸಮಸ್ಯೆಯಾಗಿದೆ ಎಂದರು.
ಕೋಲಾರ&ವೈಟ್​ಫೀಲ್ಡ್​ ನಡುವೆ ನೇರ ರೈಲು ಯೋಜನೆಗೆ 2012ರಲ್ಲೇ ಅನುಮೋದನೆ ನೀಡಲಾಗಿದೆ. ಸರ್ವೇ ಸಹ ಮುಗಿದಿದೆ. 13 ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ. ರೈಲು ಸೇವೆ ಆರಂಭಿಸಲು ರೈಲ್ವೆ ಸಚಿವರನ್ನು ಸಂಸತ್ತಿನಲ್ಲಿ ಒತ್ತಾಯ ಮಾಡಲಾಗಿದೆ. ನರಸಾಪುರ ಮತ್ತು ವೇಮಗಲ್​ ಕೈಗಾರಿಕಾ ಪ್ರದೇಶವಾಗಿದ್ದು, ಹೆಚ್ಚು ಜನ ಹೊರಗಡೆಯಿಂದ ಬರಲಿದ್ದು, ಅವರಿಗೆಲ್ಲ ಈ ಮಾರ್ಗವು ಅನುಕೂಲವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಮುಖಂಡ ಸಿಎಂಆರ್​ ಶ್ರೀನಾಥ್​, ವೇಮಗಲ್​ &ನರಸಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಊರಟ ಅಗ್ರಹಾರ ಚೌಡರೆಡ್ಡಿ, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್​, ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಎಂ.ಮಮತಾ, ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಳ್ಳಿ ಸುರೇಶ್​, ನರಸಾಪುರ ಕೆಪಿಎಸ್​ ಅಧ್ಯಕ್ಷ ಎಂಟಿಬಿ ಶ್ರೀನಿವಾಸ್​, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಸಿಎಂಎಂ ಮಂಜುನಾಥ್​, ನರಸಾಪುರ ಗ್ರಾಪಂ ಮಾಜಿ ಸದಸ್ಯ ನೌಶಾದ್​ ಖಾನ್​, ಮುಖಂಡ ಖಾಜಿ ಕಲ್ಲಹಳ್ಳಿ ಹರೀಶ್​ಗೌಡ, ಬ್ಲಾಕ್​ ಕಾಂಗ್ರೆಸ್​ ಕಾರ್ಯದರ್ಶಿ ನಾಗಲಾಪುರ ಪಾಟೀಲ್​, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಸಿಮ್​, ನರಸಾಪುರ ಗ್ರಾಪಂ ಪಿಡಿಒ ಮುನಿರಾಜು, ಬೆಳ್ಳೂರು ಗ್ರಾಪಂ ಪಿಡಿಒ ಸಂಪರಾಜು ಇದ್ದರು.