ಕಕ್ಕೇರಾದಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ನಿರ್ಮಾಣ ಕಾಮಗಾರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕರು ಗುದ್ದಲಿ ಪೂಜೆ ನೆರವೇರಿಸಿದರು. ಪೂಜ್ಯ ನಂದಣ್ಣಪ್ಪ ಪೂಜಾರಿ, ರಾಜಶೇಖರಗೌಡ ಪಾಟೀಲ್ ವಜ್ಜಲ್, ನಿಂಗರಾಜ ಬಾಚಿಮಟ್ಟಿ, ಗುಂಡಪ್ಪ ಸೊಲಾಪುರ, ಪರಮಣ್ಣ ಕಮತಗಿ ಇತರರಿದ್ದರು.
- ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ
- ಕಕ್ಕೇರಾದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಚಾಲನೆ
ಕಕ್ಕೇರಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೆ ನನ್ನ ಮೂಲ ಗುರಿಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹೊಸ ಬಸ್ ನಿಲ್ದಾಣ ಹತ್ತಿರ ಕೃಷಿ ಇಲಾಖೆ 2025&26ನೇ ಸಾಲಿನ ಆರ್ಐಡಿಎಫ್ ಟ್ರಾಂಚ್&31 ಯೋಜನೆಯಡಿ ಮಂಜೂರಾದ ನೂತನ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ಮತೇತ್ರದ ಪ್ರತಿಯೊಂದು ಪ್ರಮುಖ ಪಟ್ಟಣ, ಗ್ರಾಮ, ಹಳ್ಳಿ, ದೊಡ್ಡಿ, ತಾಂಡಾಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿಯೇ ದೊಡ್ಡದಾದ ಹೋಬಳಿ ಕೇಂದ್ರವಾದ ಕಕ್ಕೇರಾ ಪಟ್ಟಣಕ್ಕೆ ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ಹಾಗೂ ಗೋದಾಮು ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ರೈತ ಸಂಪರ್ಕ ಕೇಂದ್ರ ನಡೆಸಲಾಗುತ್ತಿತ್ತು. ಅದನ್ನು ಹೋಗಲಾಡಿಸಲು ನಮ್ಮ ಸರ್ಕಾರ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ನಿರ್ಮಾಣಕ್ಕೆ ಮುಂದಾಗಿದೆ ಎಂದರು. ಪಟ್ಟಣದ ಎನೇ ಪ್ರಮುಖ ಸಮಸ್ಯೆ ಇದ್ದರೆ ನೇರವಾಗಿ ನನ್ನ ಗಮನಕ್ಕೆ ತಂದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಪೂಜ್ಯ ನಂದಣ್ಣಪ್ಪ ಪೂಜಾರಿ ಭೂಮಿ ಪೂಜೆ ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಮಲ್ಲಣ್ಣ ಸಾಹುಕಾರ್, ಶರಣು ಸಾಹುಕಾರ್ ದಂಡಿನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪೂರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ಮುಖಂಡರಾದ ಲಕ್ಷ$್ಮಣ ಲಿಂಗದಳ್ಳಿ, ದ್ಯಾವಪ್ಪ ಜಂಪಾ, ಮುದ್ದಣ್ಣ ಅಮ್ಮಾಪೂರ, ಶರಣಕುಮಾರ ಸೊಲಾಪೂರ, ಬಸಯ್ಯ ಸ್ವಾಮಿ, ಮಲ್ಲು ಹುಲಿಕೇರಿ, ಲಕ್ಕಪ್ಪ ಮೇಲಾ, ಮಲ್ಲಣ್ಣ ಹೆಗ್ಗನದೊಡ್ಡಿ, ರಾಮಣ್ಣಗೌಡ, ಗೋಪಾಲ ದೊರೆ ಅರಕೇರಿ, ಮುನ್ನಾ ದಖನಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್ ಸೇರಿ ಅನೇಕರು ಇದ್ದರು.