ತಿಕೋಟಾದ ಶ್ರೀ ಶಾರದಾಂಬ ಶಿಕ್ಷಣ ಸಂಸ್ಥೆಯೆದುರು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದು. 
ರಾಜ್ಯ

ಬಿಗಿ ಬಂದೋಬಸ್ತ್ನಲ್ಲಿ ಕಾನ್‌ಸ್ಟೆಬಲ್ ಪರೀಕ್ಷೆ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • ವಿಜಯಪುರದಲ್ಲಿ ಪ್ರಶ್ನೆಪತ್ರಿಕೆ-ಒಎಂಆರ್ ಪ್ರತಿ ಸಮೇತ ಅಭ್ಯರ್ಥಿಗಳ ಹೋರಾಟ
  • ವರದಿ ಕೇಳಿದ ಕೆಇಎ
ಬೆಂಗಳೂರು:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯಾದ್ಯಂತ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ನಡೆಯಿತು. ವಿಜಯಪುರ ಜಿ¯್ಲÉ ತಿಕೋಟಾದ ಶ್ರೀ ಶಾರದಾಂಬಾ ಪಿಯು ಕಾಲೇಜು ಕೇಂದ್ರದಲ್ಲಿ ಒಎಂಆರ್ ಉತ್ತರಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಯ ಕ್ರಮ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಗೊಂದಲ ಸೃಷ್ಟಿಯಿಂದಾಗಿ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆಪತ್ರಿಕೆ ಸಮೇತ ಕಾಂಪೌAಡ್ ಹಾರಿ ಹೊರನಡೆದು ಗಲಾಟೆ ನಡೆಸಿದರು.

ಬೆಂಗಳೂರಿನಲ್ಲಿ ಅತಿ ಹೆಚ್ಚು ೧೪೯ ಸೇರಿ ರಾಜ್ಯದ ೮೮೪ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಽಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿz್ದÁರೆ.
ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದಂತೆ ತಂತ್ರe್ಞÁನದ ಗರಿಷ್ಠ ಬಳಕೆ ಮಾಡಿಕೊಳ್ಳಲಾಯಿತು. ಎಲ್ಲ ಪರೀಕ್ಷಾ ಕೇಂದ್ರ ಮತ್ತು ಕೊಠಡಿಗಳ ಮೇಲೆ ವೆಬï‌ಕಾಸ್ಟಿಂಗ್ ಮೂಲಕ ನಿಗಾ ವಹಿಸಲಾಗಿತ್ತು. ಬೆಂಗಳೂರು ಸೇರಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿ¯್ಲÉ ಪರೀಕ್ಷಾ ಕೇಂದ್ರಗಳ ಮೇಲೂ ಕೆಇಎ ಕೇಂದ್ರ ಕಚೇರಿಯ ಕಮಾಂಡ್ ಸೆಂಟರ್ ಮೂಲಕ ನೇರ ನಿಗಾ ಇರಿಸಲಾಗಿತ್ತು.
ವರದಿ ಕೇಳಿದ ಕೆಇಎ: ವಿಜಯಪುರ ಜಿ¯್ಲÉ ತಿಕೋಟಾದ ಶ್ರೀ ಶಾರದಾಂಬಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆಪತ್ರಿಕೆ ಸಮೇತ ಕಾಂಪೌAಡ್ ಹಾರಿ ಹೊರ ನಡೆದಿರುವ ಬಗ್ಗೆ ಜಿ¯್ಲÁಽಕಾರಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಽಕಾರ ವರದಿ ಕೇಳಿದೆ.
ನಿಯಮಾನುಸಾರ ಪರೀಕ್ಷೆ ಮುಗಿದ ನಂತರವೇ ಅಭ್ಯರ್ಥಿಗಳು ಕೇಂದ್ರದಿAದ ಹೊರ ಹೋಗಬೇಕು. ಆದರೆ ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯ¯್ಲÉÃ ಒಎಂಆರ್ ಶೀಟ್ ಮತ್ತು ಪ್ರಶ್ನೆಪತ್ರಿಕೆಯೊಂದಿಗೆ ಹೊರ ನಡೆದಿz್ದÁರೆ. ಅಲ್ಲದೆ ಕಾಂಪೌAಡ್ ಹಾರಿ ಓಡಿ ಹೋಗಿದ್ದು ಕಾನೂನು ಪ್ರಕಾರ ಅಪರಾಧ. ಆ ಕೇಂದ್ರದಲ್ಲಿ ೧೨೦ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ಒಎಂಆರ್ ಪ್ರತಿ ಸ್ಕಾ÷್ಯನ್

ಪರೀಕ್ಷೆಯಲ್ಲಿ ನಕಲು ಹಾಗೂ ಪಾರದರ್ಶಕತೆ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕಾ÷್ಯನ್ ಮಾಡಿ ಕೆಇಎ ವೆಬï‌ಸೈಟ್‌ಗೆ ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ಕೆಇಎ ಕೈಗೊಂಡಿದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಒಎಂಆರ್ ಸ್ಕಾ÷್ಯನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಂಜೆ ೭ರವರೆಗೆ ಬೆಳಗಿನ ಪರೀಕ್ಷೆಯ ೨೦ ಜಿ¯್ಲÉಗಳ ಒಎಂಆರ್ ಪ್ರತಿ ವೆಬï‌ಸೈಟ್‌ಗೆ ಅಪ್‌ಲೋಡ್ ಕೆಲಸ ಪೂರ್ಣಗೊಂಡಿದೆ. ಉಳಿದ ಜಿ¯್ಲÉಗಳ ಒಎಂಆರ್ ಪ್ರತಿಗಳನ್ನು ಸ್ಕಾ÷್ಯನ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ಕೆಇಎ ತಿಳಿಸಿದೆ.

ಶೇ.೯೨ ಅಭ್ಯರ್ಥಿಗಳು ಹಾಜರ್

ಬೆಂಗಳೂರಿನ ೧೪೯ ಸೇರಿ ರಾಜ್ಯದ ೮೮೪ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಉಳಿಕೆ ಮೂಲ ವೃಂದದ ೩,೭೭,೮೬೧ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಶೇ ೯೨.೫೨ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕ ವೃಂದದ ೭೬,೬೭೬ ಅಭ್ಯರ್ಥಿಗಳ ಪೈಕಿ ಶೇ.೯೪ ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಕೆಐಎ ತಿಳಿಸಿದೆ.

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

ಬೆAಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಕೃಷ್ಣಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಗೆ ೮ ತಿಂಗಳ ಮಗುವಿನೊಂದಿಗೆ ಮಹಿಳಾ ಅಭ್ಯರ್ಥಿ ಬಂದಿದ್ದರು. ಪರೀಕ್ಷಾ ನಿಯಮಗಳಂತೆ ಅಭ್ಯರ್ಥಿಗಳು ಮಾತ್ರ ಕೊಠಡಿಯೊಳಗೆ ಹೋಗಬೇಕು. ಆದರೆ ಕೊಠಡಿಗೆ ಹೋಗುವ ಕ್ಷಣದಲ್ಲಿ ಮಗು ಜೋರಾಗಿ ಅಳಲು ಆರಂಭಿಸಿತು. ಏನು ಮಾಡಬೇಕೆಂಬ ದಿಕ್ಕು ತೋಚದ ಅಭ್ಯರ್ಥಿಯ ನೆರವಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಬಂದು ಮಗುವನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿ ಆಕೆಯನ್ನು ಪರೀಕ್ಷೆ ಬರೆಯಲು ಕಳಿಸಿದರು. ಕೇಂದ್ರದ ಬಳಿ ಇದ್ದ ಮನೆಯೊಂದರಲ್ಲಿ ಸೀರೆ ಪಡೆದು ಜೋಕಾಲಿ ಕಟ್ಟಿ ಮಗುವನ್ನು ಸಮಾಧಾನಪಡಿಸಿದರು. ಮಹಿಳಾ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪರೀಕ್ಷೆ ಮುಗಿಸಿ ಆಚೆಗೆ ಬಂದ ತಾಯಿ ಕೂಡ ಸಿಬ್ಬಂದಿಗೆ ಧನ್ಯವಾದ ಹೇಳಿದರು.

ಜಿಲ್ಲಾಽಕಾರಿ ಸಮಜಾಯಿಷಿ

ತಿಕೋಟಾದ ಶ್ರೀ ಶಾರದಾಂಬಾ ಪಿಯು ಕಾಲೇಜು ಕೇಂದ್ರದಲ್ಲಿ ೧೧೫ಕ್ಕೂ ಅಽಕ ಅಭ್ಯರ್ಥಿಗಳಿದ್ದರು. ಬೆಳಗ್ಗೆ ೯.೩೦ಕ್ಕೆ ಪ್ರಶ್ನೆಪತ್ರಿಕೆ ತಲುಪಿತ್ತು. ಬಳಿಕ ಎಸ್‌ಒಪಿ ಪ್ರಕಾರ ಕೊಠಡಿಯಲ್ಲಿರುವ ಅಭ್ಯರ್ಥಿಗಳಿಗೆ ನೀಡಿದ್ದಾರೆ. ಒಎಂಆರ್ ಪ್ರತಿ ಸಹ ಹಂಚಿಕೆಯಾಗಿದೆ. ಆ ಸಂದರ್ಭ ಕೆಲವರು ಒಎಂಆರ್ ಶೀಟ್ ಮತ್ತು ಪ್ರಶ್ನೆಪತ್ರಿಕೆ ಕ್ರಮ ಸಂಖ್ಯೆ ತಾಳೆಯಾಗುತ್ತಿಲ್ಲವೆಂದು ತಗಾದೆ ತೆಗೆದಿದ್ದಾರೆ. ಹಾಗೆ ಒಂದಕ್ಕೊAದು ತಾಳೆಯಾಗಬೇಕೆಂಬ ನಿಯಮವಿಲ್ಲ ಎಂದು ಮೇಲ್ವಿಚಾರಕರು ತಿಳಿಹೇಳಿದ್ದರೂ ಕೆಲವರು ಕ್ಯಾಂಪಸ್‌ನಿAದ ಹೊರ ಹೋಗಿದ್ದಾರೆ. ಆದಾಗ್ಯೂ ಶಾಂತಿಯುತ ಪರೀಕ್ಷೆ ನಡೆದಿದೆ. ಆದರೆ ಹೊರ ಹೋದವರು ಮತ್ತೆ ಒಳಬರಲು ಪೊಲೀಸರಿಗೆ ತಿಳಿಸಿದ್ದಾರೆ. ಎಸ್‌ಒಪಿ ಪ್ರಕಾರ ಲಾಸ್ಟ್ ಬೆಲ್ ಆಗುವವರೆಗೂ ಹೊರಗೆ ಬಿಡಕೂಡದು ಎಂಬ ಸೂಚನೆ ಇದೆ. ಹೀಗಾಗಿ ಪೊಲೀಸರು ಒಳಗೆ ಬಿಡದ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡಲಾಗುವುದು ಎಂದು ಜಿಲ್ಲಾಽಕಾರಿ ಡಾ.ಆನಂದ ಕೆ. ಪ್ರತಿಕ್ರಿಯಿಸಿದ್ದಾರೆ.