Congress's smear campaign against the BJP
ಚಿಕ್ಕಬಳ್ಳಾಪುರ : ನರೇಂದ್ರ ಮೋದಿ, ಬಿಜೆಪಿ ಮುಸ್ಲಿಮರ ವಿರೋಧಿ ಎನ್ನುವುದು ಕಾಂಗ್ರೆಸ್ ಅಪಪ್ರಚಾರದ ಮಾತುಗಳು. ಆದರೆ ಕೇಂದ್ರ ಸರ್ಕಾರದ ಮಹತ್ತರವಾದ ಯೋಜನೆಗಳು ಎಲ್ಲ ವರ್ಗದ ಜನರ ಜತೆಗೆ ಮುಸ್ಲಿಮರಿಗೂ ಹೆಚ್ಚಾಗಿ ತಲುಪುತ್ತಿವೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ರಾಮಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುದ್ರಾ ಯೋಜನೆಯಡಿ ಮುಸ್ಲಿಮರಿಗೆ ಹೆಚ್ಚು ಅನುಕೂಲವಾಗಿದೆ. ತ್ರಿವಳಿ ತಲಾಖ್ ಕ್ರಮದಿಂದ ಮುಸ್ಲಿಮ್ ಮಹಿಳೆಯರ ರಕ್ಷಣೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದೆ. 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ. ವಿಮೆ ಲಭ್ಯವಿದೆ. ಮೊದಲಿನಿಂದಲೂ ಮುಸ್ಲಿಮರನ್ನು ಬಿಜೆಪಿ ಸಮಾನವಾಗಿ ನೋಡುತ್ತಿದೆ. ಕೇಂದ್ರ ಸರ್ಕಾರದಿಂದ ನಮಗೆ ಅನುಕೂಲವಾಗಿಲ್ಲವೇ ಎನ್ನುವುದನ್ನು ಅವರು ಆಲೋಚಿಸಬೇಕು ಎಂದರು.
ಸಂಸದನಾಗಿ ಆಯ್ಕೆಯಾದ ಬಳಿಕ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 6,449 ಕೋಟಿ ರೂ. ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ೇತ್ರಕ್ಕೆ 753.76 ಕೋಟಿ ರೂ. ಅನುದಾನ ತರಲಾಗಿದೆ. ಶ್ವೇತಪತ್ರದಂತೆ ಸಾಧನೆಯ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ತರಲಾಗಿದೆ ಎನ್ನುವುದನ್ನು ಇಲ್ಲಿನವರು ತಿಳಿಸಲಿ ಎಂದು ಪರೋಕ್ಷವಾಗಿ ಪ್ರದಿಪ್ ಈಶ್ವರ್ಗೆ ಸಂಸದ ಡಾ.ಕೆ.ಸುಧಾಕರ್ ಸವಾಲೆಸೆದರು.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಾಕಷ್ಟು ಸವಲತ್ತುಗಳು ಜಿಲ್ಲೆಗೆ ಸಿಗಲಿವೆ ಎಂಬ ನಿರೀೆಯು ಸುಳ್ಳಾಗಿದೆ. ಇಲ್ಲಿನ ಶಾಸಕರು ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಾರೆಯೇ ಹೊರತು ಅಭಿವೃದ್ಧಿಗೆ ಕಡೆಗೆ ಗಮನಹರಿಸುತ್ತಿಲ್ಲ. ಯಾವುದೇ ರಚನಾತ್ಮಕವಾಗಿ ಕೆಲಸಗಳಾಗುತ್ತಿಲ್ಲ. ಸರ್ವಾಂಗೀಣ ಪ್ರಗತಿಯು ದೂರವಾಗುತ್ತಿದೆ ಎಂದರು.
ಪ್ರಸ್ತುತ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಬರುತ್ತದೆ ಎಂಬ ನಿರೀೆಯು ಕಡಿಮೆಯಾಗಿದೆ. ಇದರ ಕಾಮಗಾರಿಗೆ ಬಳಸಿದ ವಿದ್ಯುತ್ಗೆ ಬಿಲ್ನ್ನು ಕೂಡ ಸರ್ಕಾರ ಪಾವತಿಸಿಲ್ಲ. ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ತೃತೀಯ ಹಂತದ ಸಂಸ್ಕರಣೆಯ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿಯಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗೆ ಸಂಸದ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ ಮತ್ತಿತರರು ಇದ್ದರು.
ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಡಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ಪೇರೇಸಂದ್ರ ಗ್ರಾಮ, ರಾಮಪಟ್ಟಣ ಗ್ರಾಮ, ಕೇತೇನಹಳ್ಳಿಯಲ್ಲಿ ನಿರ್ಮಾಣದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ, ಆವಲಗುರ್ಕಿಯಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳಿಗೆ ಸಂಸದ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
ದಶಪಥ ರಸ್ತೆ ನಿರ್ಮಾಣಬೆಂಗಳೂರು &ಹೈದರಾಬಾದ್ ಕಾರಿಡಾರ್ನಡಿ ದೇವನಹಳ್ಳಿಯಿಂದ ಆರಂಭವಾಗಿ ಎಸ್ಟಿಆರ್ಆರ್ ಮೂಲಕ ಹೈದರಾಬಾದ್ವರೆಗೆ ದಶಪಥ ರಸ್ತೆ ನಿರ್ಮಾಣವಾಗುತ್ತಿದೆ. 2800 ಕೋಟಿ ರೂ. ಡಿಪಿಆರ್ ಸಿದ್ಧವಾಗಿದ್ದು, ತ್ವರಿತವಾಗಿ ಟೆಂಡರ್ ಕರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಭೂ ಸ್ವಾಧಿನಪಡಿಸಿಕೊಂಡಿರುವುದರಿಂದ ಹೊಸದಾಗಿ ಜಾಗ ಬೇಕಾಗಿಲ್ಲ. ಇದರಿಂದ ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದರು.