ಕುಂದಾಣ BJP ಸಮೀಪದ ಕೊಯಿರಾ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.ಮುಖಂಡರಾದ ಚೇತನ್‌ಗೌಡ, ರಮೇಶ್‌ಬಾಬು, ಓಬದೇನಹಳ್ಳಿ ಮುನಿ ಯಪ್ಪ, ಆರ್.ಕೆ.ನಂಜೇಗೌಡ, ಮುನಿರಾಜು, ಸುಬ್ಬೇಗೌಡ ಇದ್ದರು. 
ರಾಜ್ಯ

ಬಿಜೆಪಿ ಸೇರುತ್ತಿರುವ ಕಾಂಗ್ರೆಸ್ಸಿಗರು BJP

ಬೆಂಗಳೂರು ಗ್ರಾಮಾಂತರ ಡೆಸ್ಕ್
ಕುಂದಾಣ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳ ಅಧಿಸೂಚನೆ ಹೊರಬೀಳುವ BJP ಮುನ್ನವೇ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್‌ನ ಮುಖಂಡರು ಪಕ್ಷ ತೊರೆದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಬೆಳವಣಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಇರಿಸು ಮುರಿಸು ಉಂಟಾಗಿದೆ.ಸಚಿವರ ಹಿಂಬಾಲಕರನ್ನು ಹೊರತುಪಡಿಸಿ ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನಮಾನಗಳ ವಂಚನೆ ಹಿನ್ನೆಲೆ ಬೇಸತ್ತು ವಲಸೆ ಯತ್ನ ಸಾಗಿದೆ.
ಬೆಂಗಳೂರು ಗ್ರಾಮಾಂತರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ. ರವಿಕುಮಾರ್ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಜನಪರ ಆಡಳಿತ ಮೆಚ್ಚಿ ಭ್ರಷ್ಟಾಚಾರ ತಡೆಗಟ್ಟುವುದಲ್ಲದೆ, ಅಧಿಕಾರ ದಾಹದಲ್ಲಿರುವ ಕೆಲ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ನಿಜಕ್ಕೂ ತಾಲೂಕಿನಲ್ಲಿ ಪಕ್ಷ ಬಲವರ್ಧನೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರ ಅಗತ್ಯತೆಗಳಿಗೆಸ್ಪಂದಿಸಿ ಜನಸಾಮಾನ್ಯರ ಕೈಗೆಟುಕುವ ಕಾರ್ಯಕರ್ತನಾಗಿ ಬೆಳೆಯಬೇಕು ಎಂದರು.
ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ಮುನೇಗೌಡ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಮೇಲೆ ಯಾವುದೇ ಬೇಸರವಿಲ್ಲ. ನಮ್ಮಲ್ಲಿನ ಸ್ಥಳೀಯ ಮುಖಂಡರ ವರ್ತನೆ ಬೇಸರ ತರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಬ್ಯಾನರ್‌ನಲ್ಲಿ ಫೋಟೋ, ಸಭೆ ಸಮಾರಂಭಗಳಲ್ಲಿ ಕಡೆಗಣಿಸುತ್ತಿದ್ದಾರೆ. ಬಿಜೆಪಿ ಸೇರ್ಪಡೆಯಾಗುವ ಮಾಹಿತಿ ಇದ್ದರೂ ನಮ್ಮನ್ನು ಕಡೆಗಣಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಚ್ಚೇಗೌಡರ ಅವಧಿಯಲ್ಲಿ ನಾನು ತಾಲೂಕಿನ ಮುಖಂಡನಾಗಿದ್ದೆ. ಈಗ ನಮ್ಮನ್ನು ಎಲ್ಲ ಕಡೆಯೂ ಕಡೆಗಣಿಸಿರುವುದು ಬೇಸರ ತಂದಿದೆ. ಹಾಗಾಗಿ ಸಂಸದ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ಅವರ ಭರವಸೆಮೇರೆಗೆ ಇಂದು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಮುಂಬರುವ ತಾಪಂ, ಜಿಪಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ. ಪಕ್ಷ ಒಪ್ಪಿದರೆ ಅಭ್ಯಂತರವಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮಾತ್ರ ಪ್ರಾಮಾಣಿಕವಾಗಿ ಶ್ರಮಿಸುವೆ. ನಮ್ಮಲ್ಲಿ ಈಗಾಗಲೇ ಹತ್ತು ಜನ ಸೇರ್ಪಡೆ ಆಗಿದ್ದೇವೆ. ಜ.25 ರ ಒಳಗಾಗಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗುವ ಸಂಭವವಿದೆ ಎಂದರು.
ಸೇರ್ಪಡೆ: ಭಾರತೀಯ ಜನತಾ ಪಾರ್ಟಿ ಸುಬ್ರಮಣಿ ಸ್ಥಳೀಯ ಮುಖಂಡತ್ವದಲ್ಲಿ ಮಾಜಿ ಡೇರಿ ನಿರ್ದೇಶಕ ಬಾಲಣ್ಣ, ಯುವ ಕಾಂಗ್ರೆಸ್ ಮುಖಂಡ ನಿರಂಜನ್, ಕೃಷ್ಣಪ್ಪ, ಜೆಡಿಎಸ್ ಮುಖಂಡ ದೇವರಾಜು, ಅಭಿಲಾಷ್, ವಿನಯ್ ಕುಮಾರ್, ಧನುಷ್ ಗೌಡ, ಶಿವಕುಮಾರ್ ಸೇರ್ಪಡೆಗೊಂಡಿದ್ದಾರೆ ಎಂದು ಎಚ್. ಎಂ.ರವಿ ಕುಮಾರ್ ತಿಳಿಸಿದರು.