ಕೆ.ಆರ್.ನಗರದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಾಸಕ ಡಿ.ರವಿಶಂಕರ್ ಅಭಿನಂದಿಸಿದರು. ಜೆ.ಶಿವಣ್ಣ, ಕೆ.ಪಿ.ಯೋಗೀಶ್ ಇತರರಿದ್ದರು.  
ರಾಜ್ಯ

ಟಿಎಪಿಸಿಎಂಎಸ್‌ನಲ್ಲಿ ಕಾಂಗ್ರೆಸ್‌ಗೆ ಜಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ವ್ಯವಸಾಯೊತ್ಪನ್ನ ಮಾರಾಟ ಸಹಕಾರ ಸಂಘ
  • ಚುನಾವಣೆಯಲ್ಲಿ 12 ಕಾಂಗ್ರೆಸ್ ಬೆಂಬಲಿತರು ಜಯ
ಕೆ.ಆರ್.ನಗರ: ತಾಲೂಕು ವ್ಯವಸಾಯೊತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ಕಾಂಗ್ರೆಸ್ ಬೆಂಬಲಿತರು ಜಯಗಳಿಸುವ ಮೂಲಕ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎ ತರಗತಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ) ಆಯ್ಕೆ ಬಯಸಿ ಸ್ಪರ್ಧಿಸಿದ್ದ ಎಂ.ಎಸ್.ಅನಂತ-16, ಕೆ.ಬಿ.ನಟರಾಜು -16, ಎಚ್.ಎಸ್.ವೆಂಕಟೇಶ್-15, ಶಂಕರ ನಾಯಕ-16, ಎನ್.ಎಸ್.ವಿಠಲ 15 ಮತ ಪಡೆದು ಜಯಗಳಿಸಿದ್ದಾರೆ.
ಹಿಂದುಳಿದ ವರ್ಗದಿಂದ ಎ ಎಸ್.ಸಿದ್ದೇಗೌಡ 1009, ಮಹಿಳಾ ಮೀಸಲು ಕ್ಷೇತ್ರದಿಂದ ಡಿ.ಕೆ.ವನಾಜಾಕ್ಷಿ 955, ಜಿ.ಆರ್.ಸ್ವರೂಪಾ 972, ಹಿಂದುಳಿದ ವರ್ಗ ಬಿ ಕ್ಷೇತರದಿಂದ ಎಚ್.ಎಚ್.ನಾಗೇಂದ್ರ 959, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಂ. ಮಹದೇವನಾಯಕ 942, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಡಿ.ಪಿ.ದಿನೇಶ್ 817, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಪಿ.ಪ್ರಶಾಂತ್ 904 ಮತ ಪಡೆದು ಜಯ ಸಾಧಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಜಿಪಂ ಮಾಜಿ ಸದಸ್ಯ ಅಮೀತ್ ವಿ. ದೇವರಹಟ್ಟಿ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಎಚ್.ಸಿ.ಕುಮಾರ್, ಮೆಡಿಕಲ್‌ರಾಜಣ್ಣ, ನಗರಾಧ್ಯಕ್ಷ ಸಂತೋಷ್‌ಗೌಡ, ವಕ್ತಾರ ಕೆ.ಎಲ್.ರಮೇಶ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಬೆಂಬಲಿತರ ಪರವಾಗಿ ಮತಯಾಚನೆ ಮಾಡಿದರೂ ಕೂಡ ಎಲ್ಲರೂ ಪರಾಜಿತರಾದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಾಸಕ ಡಿ.ರವಿಶಂಕರ್ ಮತಗಟ್ಟೆ ಹತ್ತಿರ ಆಗಮಿಸಿ ಜಯಗಳಿಸಿದ್ದ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿ ಸಂಭ್ರಮಿಸಿದರು.