ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಸಂಟನಾ ಸೃಜನ್​ ಅಭಿಯಾನದಲ್ಲಿ ಎಐಸಿಸಿ ವೀಕ್ಷಕ ವಿಶ್ವಜಿತ್​ ಕದಂ ಅವರನ್ನು ಬ್ಲಾಕ್​ ಕಾಂಗ್ರೆಸ್​ನಿಂದ ಸನ್ಮಾನಿಸಲಾಯಿತು. ಶಾಸಕ ಎಂ.ವೈ.ಪಾಟೀಲ್​, ಎಂಎಲ್​ಸಿ ಜಗದೇವ ಗುತ್ತೇದಾರ್​, ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​, ಕೆಪಿಸಿಸಿ ವೀಕ್ಷಕ ಅರವಿಂದ ಅರಳಿ, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ ಇದ್ದರು. 
ರಾಜ್ಯ

ಎಲ್ಲರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್​

ಅಫಜಲಪುರ: ವಿವಿಧ ಜಾತಿ, ಧರ್ಮ, ಪಂಗಡದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್​ ಎಂದು ಎಐಸಿಸಿ ವೀಕ್ಷಕ ಹಾಗೂ ಮಹಾರಾಷ್ಟ್ರ ಶಾಸಕ ವಿಶ್ವಜಿತ್​ ಕದಂ ಅಭಿಪ್ರಾಯಪಟ್ಟರು. ಬ್ಲಾಕ್​ ಕಾಂಗ್ರೆಸ್​ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂಘಟನಾ ಸೃಜನ್​ ಅಭಿಯಾನದಲ್ಲಿ ಮಾತನಾಡಿ, ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಬೂತ್​ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಎಲ್ಲರ ಸಲಹೆ&ಸೂಚನೆ ಪಡೆದು ಹೈಕಮಾಂಡ್​ಗೆ ವರದಿ ನೀಡಲಾಗುವುದು ಎಂದರು. ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಮಾತನಾಡಿದರು. ವಿಧಾನ ಪರಿಷತ್​ ಸದಸ್ಯರೂ ಆದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್​, ಕೆಪಿಸಿಸಿ ವೀಕ್ಷಕ ಅರವಿಂದ ಅರಳಿ, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ, ಪ್ರಮುಖರಾದ ಲಕ್ಷಿ$್ಮಪತಿ, ಹನುಮಾನ ಪವಾರ್​, ಸೋಮಶೇಖರ ಹಿರೇಮಠ, ಕಿರಣ ದೇಶಮುಖ, ಪಪ್ಪು ಪಟೇಲ್​, ಮತೀನ್​ ಪಟೇಲ್​, ಪ್ರಕಾಶ ಜಮಾದಾರ, ಜೆ.ಎಂ.ಕೊರಬು, ಶಿವಾನಂದ ಗಾಡಿಸಾಹುಕಾರ, ಮಂಜುನಾಥ ಅಂಜುಟಗಿ, ಚಂದ್ರಶೇಖರ ಕರಜಗಿ, ರೇಣುಕಾ ಸಿಂಗೆ, ಅಂಬರೀಶ ಬುರಲಿ, ಅಣವೀರಯ್ಯ ಮಠಪತಿ, ವಿಶ್ವನಾಥ ಮಲಘಾಣ, ಪ್ರವಿಣ ಕಲ್ಲೂರ, ಮಹಾನಿಂಗ ಅಂಗಡಿ, ಸಿದ್ದು ಚೌಡಾಪುರ ಇತರರಿದ್ದರು.