- ಚಿತ್ತಾಪುರದಲ್ಲಿ ರಸ್ತೆ ಸಂಚಾರ ತಡೆ
- ಮನುವಾದಿಗಳ ಅಸ್ಪಶ್ಯ ಭಾವಕ್ಕೆ ಆಕ್ರೋಶ
ಚಿತ್ತಾಪುರ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷರಾದ ರಾಜ್ಯಸಭಾ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆ ನಡೆಸಿದ ನಂತರ ಬಿಜೆಪಿ ಮತ್ತು ಆರೆಸ್ಸೆಸ್ ಪ್ರೋತ್ಸಾಹಿತ ಮನುವಾದಿಗಳು ಗಂಗಾಜಲದಿಂದ ವೇದಿಕೆ ಸ್ಥಳ ಶುದ್ಧೀಕರಿಸಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ನಿಂದ ಪಟ್ಟಣದ ಲಾಡ್ಜಿಂಗ್ ಕ್ರಾಸ್ನಲ್ಲಿ ಮಂಗಳವಾರ ರಸ್ತೆ ಸಂಚಾರ ತಡೆ ಮೂಲಕ ಬೃಹತ್ ಪ್ರತಿಭಟನೆ ನಡೆಯಿತು.
ವೇದಿಕೆ ಶುದ್ಧೀಕರಿಸಿ ಹಿರಿಯ ದಲಿತ ನಾಯಕನಿಗೆ ಅವಮಾನ ಮಾಡಿದ್ದು ಸಹಿಸಲಾಗದು. ಅಸ್ಪಶ್ಯ ಭಾವದೊಂದಿಗೆ ಶುದ್ಧೀಕರಣ ಮಾಡಿದ ಮತ್ತು ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಅಧ್ಯಕ್ಷ ಮಹೆಮೂದ್ ಸಾಹೇಬ್ ಒತ್ತಾಯಿಸಿದರು.
ಹಿರಿಯ ಮುಖಂಡ ಸುರೇಶ್ ಮೆಂಗನ್ ಮಾತನಾಡಿ, ಅಯೋಧ್ಯೆ ರಾಮಮಂದಿರ ದೇಣಿಗೆ ಮತ್ತು ಹುಂಡಿಯಲ್ಲಿನ ಹಣ ಬಿಜೆಪಿ ಹಾಗೂ ಆರ್ಎಸ್ಎಸ್ನವರು ಕಳವು ಮಾಡಿ ಮಂದಿರ ಮಲೀನಗೊಳಿಸಿದ್ದಾರೆ. ಅಲ್ಲೂ ಗಂಗಾಜಲದ ಮೂಲಕ ಶುದ್ಧೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ದಲಿತ, ಹಿಂದುಳಿದ ನಾಯಕರನ್ನು ಅವಮಾನಿಸುವ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮರತೂರ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ ದೊಡ್ಡಮನಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪ್ರಮುಖರಾದ ಚಂದು ಜಾಧವ್, ಶ್ರೀನಿವಾಸ ಸಗರ, ಶೀಲಾ ಕಾಶಿ, ಬಸವರಾಜ ಹೊಸಳ್ಳಿ, ಬಸವರಾಜ ಚಿನ್ನಮಳ್ಳಿ, ಸೂರ್ಯಕಾಂತ ರದ್ದೆವಾಡಗಿ, ಬಾಬು ಕಾಶಿ, ರಮೇಶ ಹಡಪದ, ನಾಗಯ್ಯ ಗುತ್ತೇದಾರ್ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯ ಸಮಿತಿ ಜಿಲ್ಲಾಧ್ಯಕ್ಷ ಜಯಪ್ರಕಾಶ ಕಮಕನೂರ, ಪ್ರಮುಖರಾದ ಶಿವರುದ್ರ ಭೀಣಿ, ಜಗಣ್ಣಗೌಡ ರಾಮತೀರ್ಥ, ವೀರಣ್ಣಗೌಡ ಪರಸರೆಡ್ಡಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಅರವಿಂದ ಚವ್ಹಾಣ್, ಚಂದ್ರಶೇಖರ ಕಾಶಿ, ರಾಜಶೇಖರ ತಿಮ್ಮನಾಯಕ, ಯಲ್ಲಾಲಿಂಗ ಮುಗುಟಿ, ದೇವಿಂದ್ರ ಅರಣಕಲ್, ಶಿವಕುಮಾರ ಯಾಗಾಪುರ, ನಿಂಗಣ್ಣ ಹೇಗಲೇರಿ, ಹಣಮಂತ ಸಂಕನೂರ, ಮಲ್ಲಿಕಾರ್ಜುನ ಕಾಳಗಿ, ಸಿದ್ದುಗೌಡ ಅಫಜಲಪುರಕರ್, ನಾಗರೆಡ್ಡಿ ಗೋಪಸೇನ್, ಶಿವಕುಮಾರ ಸುಲ್ತಾನಪುರ, ಜಗದೀಶ ಚವ್ಹಾಣ್, ಶಿವಕಾಂತ ಬೆಣ್ಣೂರಕರ್, ದೇವಿಂದ್ರ ಯಾಬಾಳ, ಮನ್ಸೂರ್ ಪಟೇಲ್ ತೊಂಚಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವಯ್ಯ ಗುತ್ತೇದಾರ್, ಈರಪ್ಪ ಬೋವಿ, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್, ಶೇಖ ಬಬ್ಲು, ಸಂಜಯ ಬುಳಕರ್, ವಿಜಯಕುಮಾರ ಚವ್ಹಾಣ್, ಬಸವರಾಜ ತುಪ್ಪದ, ಮಾಣಿಕ ಅಲ್ಬಾ, ದಶರಥ ಬಂಡಿ ಪಾಲ್ಗೊಂಡಿದ್ದರು.
ಸುಮಾರು ಎರಡು ತಾಸು ನಡೆ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ, ಜಾತಿ ತಾರತಮ್ಯಕ್ಕೆ ಧಿಕ್ಕಾರ ಜತೆ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್, ಸೂಪರ್ ಸ್ಟಾರ್ ಮಲ್ಲಿಕಾರ್ಜುನ ರ್ಖಗೆ, ಪ್ರಿಯಾಂಕ್ ರ್ಖಗೆ ಎಂಬ ಘೋಷಣೆಗಳನ್ನು ಮೊಳಗಿಸಿದ ಪ್ರತಿಭಟನಾಕಾರರು, ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು. ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ದಲಿತ ಸಮುದಾಯದ ಮಹಾ ನಾಯಕ, ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ನಿತ್ಯ ಜೀವನದಲ್ಲಿ ಪಾಲಿಸುತ್ತ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಗಲಿರುಳು ಹೋರಾಡುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದ್ದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.
— > ಶಿವಾನಂದ ಪಾಟೀಲ್ ಮರತೂರ ಜಿಪಂ ಮಾಜಿ ಸದಸ್ಯ ಕಲಬುರಗಿ