ರಾಜ್ಯ

ದೇಶದ ಮಾತೃಶಕ್ತಿ ಶಾಪಕ್ಕೆ ಕಾಂಗ್ರೆಸ್​ ಗುರಿ

ಕಲಬುರಗಿ: ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.33 ಮಹಿಳಾ ಮೀಸಲು ಜಾರಿ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ವಂದನಾ ಮಸೂದೆ ಪ್ರಸ್ತಾಪವನ್ನು ಸೋಲಿಸಿ ದೇಶದ ಮಹಿಳಾ ಶಕ್ತಿಗೆ ಅವಮಾನ ಮಾಡಿದ ಕಾಂಗ್ರೆಸ್​ಗೆ ಮಾತೃಶಕ್ತಿಯ ಶಾಪ ತಟ್ಟಲಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್​ ಕಿಡಿಕಾರಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನರೇಂದ್ರ ಮೋದಿ ಅವರು ದೇಶದ ಮಹಿಳಾ ಶಕ್ತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜನಸಂಖ್ಯೆ ಆಧಾರದ ಮೇಲೆ ಶೇ.33 ಮೀಸಲು ಮೂಲಕ ಅವಕಾಶ ನೀಡುವ ಹಾಗೂ ಶೇ.50 ಲೋಕಸಭಾ ೇತ್ರಗಳ ಸಂಖ್ಯೆ ಹೆಚ್ಚಳ ಮಾಡುವ ೇತ್ರ ಮರು ವಿಂಗಡಣೆ ಪ್ರಸ್ತಾಪವನ್ನು ಕಾಂಗ್ರೆಸ್​ ನೇತೃತ್ವದ ಇಂಡಿ ಒಕ್ಕೂಟ ವಿರೋಧಿಸಿ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮುಂದಿನ ಚುನಾವಣೆಗಳಲ್ಲಿ ಮಹಿಳೆಯರು ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಲಿದ್ದಾರೆ. ಡಾ.ಬಿ.ಆರ್​.ಅಂಬೇಡ್ಕರ್​ ಅವರು ಹಿಂದು ಕೋಡ್​ ಬಿಲ್​ ಲೋಕಸಭೆಯಲ್ಲಿ ಮಂಡಿಸಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವಾಗಲೂ ಕಾಂಗ್ರೆಸ್​ ವಿರೋಧಿಸಿತ್ತು. ಈ ಹಿಂದೆ ಮಂಡಲ್​ ಕಮಿಷನ್​ ವಿರೋಧಿಸಿದಂತೆ ಇದೀಗ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಮಹಿಳಾ ಮೀಸಲಾತಿ ಧಿಕ್ಕರಿಸಿ ದೇಶದ ಮಾತೃಶಕ್ತಿಗೆ ಅಪಮಾನ ಮಾಡಿದ್ದಾರೆ. ೇತ್ರ ವಿಂಗಡಣೆ ಮತ್ತು ಮಹಿಳಾ ಮೀಸಲು ಅನುಷ್ಠಾನಗೊಂಡರೆ ಕಾಂಗ್ರೆಸ್​ಗೆ ಮುಂದೆ ಅಪಾಯವಿದೆ ಎಂಬ ಭಯದಿಂದ ಮಸೂದೆ ಸೋಲಿಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್​ ಪವನ್ನು ದೇಶದ ಮಹಿಳೆಯರು ಎಂದಿಗೂ ಮಿಸಲಾರರು ಎಂದಿದ್ದಾರೆ.