ಉತ್ತರಾಖಂಡದ ಹಲದ್ವಾನಿ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿ ಹೋದ ಬಳಿಕ ಆ ಸ್ಥಳವನ್ನು ಗಂಗಾಜಲದಿAದ ಶುದ್ಧೀಕರಿಸಿರುವುದನ್ನು ಖಂಡಿಸಿ ಯಾದಗಿರಿ ಸುಭಾಷ್ ಚೌಕ್‌ನಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಂಸದ ಕುಮಾರ ನಾಯಕ, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಶ್ಯಾಮಸನ್ ಮಾಳಿಕೇರಿ, ಶರಣಪ್ಪ ಮಾನೇಗಾರ ಇತರರಿದ್ದರು.
- ಸಂಸದ ಕುಮಾರ ನಾಯಕ ಆಗ್ರಹ
- ಎಐಸಿಸಿ ಅಧ್ಯಕ್ಷ ಖರ್ಗೆ ಬಂದುಹೋದ ಸ್ಥಳ ಶುಚಿಗೊಳಿಸಿದ್ದಕ್ಕೆ ಕಿಡಿ
ಉತ್ತರಾಖಂಡ ರಾಜ್ಯದ ಹಲದ್ವಾನಿ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿ ಹೋದ ಬಳಿಕ ಆ ಸ್ಥಳವನ್ನು ಗಂಗಾಜಲದಿAದ ಶುದ್ಧೀಕರಿಸಿರುವುದನ್ನು ಖಂಡಿಸಿ ನಗರದ ಸುಭಾಷ್ ಚೌಕ್‌ನಲ್ಲಿ ಕಾಂಗ್ರೆಸ್ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿತು.
ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ನೇತೃತ್ವದಲ್ಲಿ ಸೇರಿದ್ದ ಪದಾಽಕಾರಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಯಚೂರು-ಯಾದಗಿರಿ ಸಂಸದ ಜಿ.ಕುಮಾರ ನಾಯಕ, ದೇಶ ಸ್ವಾತಂತ್ರ‍್ಯಕ್ಕೆ ನಾಳೆಗೆ ೮೦ ವರ್ಷ ಗತಿಸುತ್ತಿದೆ. ಇಷ್ಟು ವರ್ಷವಾದರೂ ದೇಶದಲ್ಲಿ ಜಾತಿ ವ್ಯವಸ್ಥೆ ಜೀವಂತವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಲ್ಲಿನ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲವೆಂದರೆ ಪರೋಕ್ಷವಾಗಿ ಇದಕ್ಕೆ ಬೆಂಬಲಿಸಿದAತೆಯೇ ಸರಿ ಎಂದು ಜರಿದರು.
ಒಂದು ರಾಷ್ಟಿçÃಯ ಪಕ್ಷದ ಅಧ್ಯಕ್ಷರಾದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನ ದೇಶದ ಸಮಸ್ತ ಪ್ರಜ್ಞಾವಂತರು ಮತ್ತು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ಇದು ಕೇವಲ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ಮಾನವಕುಲಕ್ಕೆ ಮಾಡಿದ ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಜಾತಿವಾತಿಗಳನ್ನು ಬಂಽಸಬೇಕೆAದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ, ದೇಶ ಕಂಡ ಽÃಮಂತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನವನ್ನು ಉಗ್ರವಾಗಿ ಖಂಡಿಸುವುದಾಗಿ ಹೇಳಿದರು.
ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರೋಽ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ ಸರ್ಕಾರ ಮನುವಾದಿಗಳ ಪರವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ಪ್ರಜಾಪ್ರಭುತ್ವ ವಿರೋಽಯಾಗಿದ್ದು, ಕೂಡಲೇ ಆರೋಪಿಗಳನ್ನು ಬಂಽಸಬೇಕೆAದು ಒತ್ತಾಯಿಸಿದರು.
ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಬಾಷುಮೀಯಾ ವಡಗೇರಾ, ಶಿಕ್ಷಕ ಘಟಕದ ರಾಜ್ಯ ಉಪಾಧ್ಯಕ್ಷ ಆಶಪ್ಪ ಮಾಸ್ಟರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳಾರ, ಮುಖಂಡರಾದ ಸುದರ್ಶನ ನಾಯಕ, ಲಕ್ಷಾ÷್ಮರೆಡ್ಡಿ ಮಾತನಾಡಿದರು. ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಚಿದಾನಂದಪ್ಪ ಕಾಳೆಬೆಳಗುಂದಿ, ಹೊನ್ನೇಶ ದೊಡ್ಡಮನಿ, ಲಕ್ಷ÷್ಮಣ ರಾಠೋಡ್, ಕೃಷ್ಣಾ ದಾಸನಕೇರಿ ಇತರರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಮಾರಕ. ದೇಶಕ್ಕೆ ಅಮೂಲ್ಯವಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದರೆ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ೩೭೧(ಜೆ) ವಿಽ ಮೂಲಕ ಎರಡನೇ ಅಂಬೇಡ್ಕರ್ ಎಂದೇ ಕರೆಸಿಕೊಳ್ಳುತ್ತಾರೆ. ಇಂತಹವರು ಬಂದು ಹೋದ ಜಾಗ ಸ್ವಚ್ಛಗೊಳಿಸುವ ಮನಸ್ಥಿತಿಗಳು ಇನ್ನೂ ಜೀವಂತ ಇರುವುದೇ ದೊಡ್ಡ ದುರಂತ.| ಬಸರೆಡ್ಡಿ ಅನಪುರಜಿಲ್ಲಾಧ್ಯಕ್ಷ, ಕಾಂಗ್ರೆಸ್ ಯಾದಗಿರಿ