ಸಾಂದರ್ಭಿಕ ಚಿತ್ರ 
ರಾಜ್ಯ

Davanagere South Bypoll: ದಾವಣಗೆರೆ ದಕ್ಷಿಣವನ್ನು ಉಳಿಸಿಕೊಂಡ ಕಾಂಗ್ರೆಸ್: 6430 ಮತಗಳ ಅಂತರದಿಂದ ಸಮರ್ಥ್ ಶಾಮನೂರು ಗೆಲುವು!

ದಾವಣಗೆರೆ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಮತ್ತು ಕಾಂಗ್ರೆಸ್​​ನಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದ ದಾವಣಗೆರೆ ದಕ್ಷಿಣ(Davanagere South bypoll) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮೊದಲ ಬಾರಿಯ ಚುನಾವಣೆಯಲ್ಲಿ 6,430 ಮತಗಳ ಅಂತರದಿಂದ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿದೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ವಿರುದ್ಧ ಸಮರ್ಥ 6,430 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಘೋಷಣೆಯೊಂದೆ ಬಾಕಿ ಇದೆ. ದಾವಣಗೆರೆಯ ಡಿಆರ್ ಆರ್ ಶಾಲೆಯಲ್ಲಿ ನಡೆದ ಮತಎಣಿಕೆ ಕಾರ್ಯದಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, 10 ಸುತ್ತುಗಳ ಬಳಿಕ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡರು.