ಮಹಿಳಾ ಮೀಸಲಾತಿ ಸೋಲಿಸಿದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನಡೆ ಖಂಡಿಸಿ ಜೆಡಿಎಸ್ ಮಹಿಳಾ ಟಕದಿಂದ ಯಾದಗಿರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಮೂರ್ತಿ ಅನಪುರ, ಪಕ್ಷದ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಶಾರದಾ ಕಡೇಚೂರ ಗುರುಮಠಕಲ್, ಜಯಶ್ರೀ ಪೊಲೀಸ್ ಪಾಟೀಲ್, ನರ್ಮದಾ ಅವಂಗಪುರ, ಪರಿಮಳ ಪಾಟೀಲ್ ಇತರರಿದ್ದರು.
- ಮೀಸಲಾತಿ ಸೋಲಿಸಿದ್ದಕ್ಕೆ ಸಿಡಿದ ನಾಗರತ್ನ ಅನಪುರ
- ಜೆಡಿಎಸ್ ಮಹಿಳಾ ಘಟಕದಿಂದ ಪತ್ರಿಭಟನೆ
ಯಾದಗಿರಿ : ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿಗೆ ಸೋಲಾಗುವಂತೆ ಮಾಡಿದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನಡೆ ಖಂಡಿಸಿ ಜಾತ್ಯತಿತ ಜನತಾದಳ (ಜೆಡಿಎಸ್) ಜಿಲ್ಲಾ ಮಹಿಳಾ ಟಕ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು. ಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪುರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತೆಯರು ನೇತಾಜಿ ಸರ್ಕಲ್ನಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ೂಷಣೆ ಕೂಗಿದರು.
ದೇಶದ ಮಹಿಳೆಯರಿಗೆ ರಾಜಕೀಯವಾಗಿ ಮೀಸಲು ಒದಗಿಸಲು ಮಂಡಿಸಿದ್ದ ಬಿಲ್ಗೆ ಉದ್ದೇಶಪೂರ್ವಕವಾಗಿ ಸೋಲಿಸಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು. ಇದರಿಂದಾಗಿ ಹೆಣ್ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿ ಎಂಥದ್ದು ಎಂಬುದು ಸಾಬೀತಾಗಿದೆ ಎಂದು ಅನಪುರ ಗುಡುಗಿದರು.
ಮಾಜಿ ಪ್ರಧಾನಿ ದೇವೇಗೌಡ ಸಹ ಇದನ್ನು ತರಲು ಮುಂದಾಗಿದ್ದಾಗ ಇದೇ ಕುತಂತ್ರ ಬುದ್ಧಿ ಉಪಯೋಗಿಸಿದ್ದ ಕಾಂಗ್ರೆಸ್ಗೆ ಹೆಣ್ಮಕ್ಕಳು ರಾಜಕೀಯವಾಗಿ ಮುಂದೆ ಬರಬಾರದು ಎಂಬ ಧೋರಣೆ ಇದೆ. ಮಹಿಳಾ ಮೀಸಲು ಮಸೂದೆ ಸೋಲಿಸಿದ ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಯುವ ನಾಯಕಿ ಪರಿಮಳ ಪಾಟೀಲ ಚಾಮನಳ್ಳಿ ಮಾತನಾಡಿ, 70 ವರ್ಷಗಳಿಂದಲೂ ಕಾಂಗ್ರೆಸ್ ಮಹಿಳೆಯರ ವಿರೋಧಿಯಾಗಿದ್ದು, ಈಗ ಮೀಸಲಾತಿಯನ್ನು ಸೋಲಿಸುವ ಮೂಲಕ ಮತ್ತೊಮ್ಮೆ ತನ್ನ ನಿಲುವು ತೋರಿಸಿಕೊಟ್ಟಿದೆ ಎಂದು ಕಿಡಿಕಾರಿದರು.
ಪ್ರಮುಖರಾದ ಶಾರದಾ ಕಡೇಚೂರ, ಜಯಶ್ರೀ ಪೊಲೀಸ್ ಪಾಟೀಲ್, ನರ್ಮದಾ ಅವಂಗಪುರ, ಅಶ್ವಿನಿ ಹೊಸಮನಿ, ಸಾವಿತ್ರಮ್ಮ ಯಡ್ಡಳ್ಳಿ, ವಿಜಯಲಕ್ಷಿ$್ಮ ಹತ್ತಿಕುಣಿ, ಇಂದಿರಾ ಕೊಳ್ಳಿ, ಶಶಿಕಲಾ ಬಿರಾದಾರ, ಸಂಗೀತಾ ಚವ್ಹಾಣ್, ಅನಸೂಯಾ ದಂತಾಪುರ, ಸಿದ್ಲಿಂಗಮ್ಮ ಯಲ್ಹೇರಿ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ವಿಶ್ವನಾಥ ಸಿರವಾರ, ಬಂದಪ್ಪ ಅರಳಿ, ಮಲ್ಲನಗೌಡ ಹಳಿಮನಿ ಕೌಳೂರ, ಅಜಯರೆಡ್ಡಿ ಯಲ್ಹೇರಿ, ದೇವಿಂದ್ರಪ್ಪ ಸುರಪುರ, ಕುಮಾರಗೌಡ ಹುಣಸಗಿ, ಶರಣಗೌಡ ಹೊಸಳ್ಳಿ, ಈಶ್ವರ ರಾಠೋಡ, ಜಯೇಂದ್ರ ಚವ್ಹಾಣ್, ಯಂಕೋಬಾ ಕಂಚಗಾರಹಳ್ಳಿ, ಮಲ್ಲಿಕಾರ್ಜುನ ಮರಂಕಲ್, ಧಮೇರ್ಶ್ ವಡಗೇರಾ ಇತರರಿದ್ದರು. ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸುಡು ಬಿಸಿಲಲ್ಲಿ 40 ನಿಮಿಷ ಪ್ರದರ್ಶನ
ಬೆಳಗ್ಗೆ 10ರ ಸುಮಾರಿಗೆ ನೇತಾಜಿ ಸರ್ಕಲ್ ಬಳಿ ಜಮಾಯಿಸಿದ ಜೆಡಿಎಸ್ ಮಹಿಳಾ ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ನೆತ್ತಿ ಸುಡುವ ಬಿಸಿಲಲ್ಲೇ ಸುಮಾರು 40 ನಿಮಿಷ ಪ್ರತಿಭಟನೆ ನಡೆಸಿದ್ದು, ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಬಂದೋಬಸ್ತ್ ಕಲ್ಪಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪಕ್ಕದ ರಸ್ತೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸರ್ಕಲ್ ಸುತ್ತ ಜೆಡಿಎಸ್ ಧ್ವಜಗಳನ್ನು ಕೈಯಲ್ಲಿ ಹಿಡಿದ ಮಹಿಳಾ ಕಾರ್ಯಕರ್ತರು ದೇವೇಗೌಡ, ಕೇಂದ್ರ ಮಂತ್ರಿ ಕುಮಾರಸ್ವಾಮಿ ಹಾಗೂ ಶಾಸಕ ಶರಣಗೌಡ ಕಂದಕೂರ ಪರ ೂಷಣೆಗಳನ್ನು ಕೂಗಿದರು.