ಕಾಂಗ್ರೆಸ್​ನಿಂದ ಬಡವರ ಬದುಕು ಹಸನು Congress 
ರಾಜ್ಯ

ಕಾಂಗ್ರೆಸ್​ನಿಂದ ಬಡವರ ಬದುಕು ಹಸನು Congress

ಪ್ರಮುಖ ಮುಖ್ಯಾಂಶಗಳು

  • ಡಾ.ಎಚ್​.ಎನ್​.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್​.ಎಚ್​.ಶಿವಶಂಕರರೆಡ್ಡಿ ಹೇಳಿಕೆ
ಗೌರಿಬಿದನೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರ ಬದುಕನ್ನು ಹಸನಾಗಿಸಿದೆ ಎಂದು ಮಾಜಿ ಸಚಿವ, ಡಾ.ಎಚ್​.ಎನ್​.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್​.ಎಚ್​.ಶಿವಶಂಕರರೆಡ್ಡಿ ಹೇಳಿದರು. Congress
ತಾಲೂಕಿನ ದಾರಿನಾಯಕನಪಾಳ್ಯ (ಡಿ.ಪಾಳ್ಯ) ಹೋಬಳಿ ಕೇಂದ್ರದಲ್ಲಿ ಕಾಂಗ್ರೆಸ್​ ಹೋಬಳಿಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ೇತ್ರದ ಶಾಸಕರು ಅಭಿವೃದ್ಧಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಅವರು ಸೋಲಾರ್​ ಟಕಗಳ ಅಭಿವೃದ್ಧಿ ಮಾಡಿಕೊಳ್ಳಲು ಸೀಮಿತವಾಗಿದ್ದಾರೆ ಎಂದು ಲೇವಡಿ ಮಾಡಿದರು. ೇತ್ರದಲ್ಲಿ ಆಡಳಿತ ಯಂತ್ರ ಕುಸಿದು, ಅಭಿವೃದ್ಧಿ ಶೂನ್ಯವಾಗಿದೆ. ಶಾಸಕರು ಉತ್ಸವ ಮೂರ್ತಿಯಂತೆ ೇತ್ರದಲ್ಲಿ ಓಡಾಡಿದರೆ ಅಭಿವೃದ್ಧಿಯಾಗದು, ಗ್ರಾಮೀಣ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಆಲಿಸಬೇಕು. ಸೀರೆ, ಕ್ಯಾಲೆಂಡರ್​ ವಿತರಿಸಿದರೆ ಅಭಿವೃದ್ಧಿ ಆಗಲಾರದು ಎಂದರು.
ಡಿ.ಪಾಳ್ಯ ಹೋಬಳಿ ಕಾಂಗ್ರೆಸ್​ ಭದ್ರಕೋಟೆ, 2018ರಲ್ಲಿ ಈ ೇತ್ರವು ಗೌರಿಬಿದನೂರು ೇತ್ರಕ್ಕೊಳಪಟ್ಟಿತು. ಅಂದಿನಿಂದ ಈ ೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಅಭಿವೃದ್ಧಿ ಮಾಡಲಾಗಿದೆ. ಹಕ್ಕುಪತ್ರ, ಮನೆಗಳ ವಿತರಣೆ, ಸಮುದಾಯ ಭವನ ನಿರ್ಮಾಣ, ವಸತಿ ಶಾಲೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.
ಸ್ತ್ರೀ ಶಕ್ತಿ ಸಂಗಳಿಗೆ ಸಾಲ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್​ ಮೂಲಕ ಸಂಗಳಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷಗಳಿಂದ 1 ರೂಪಾಯಿ ಸಾಲ ನೀಡಿಲ್ಲ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಲು ಹೇಗೆ ಸಾಧ್ಯ, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಕೆ.ಎನ್​.ಕೇಶವರೆಡ್ಡಿ ಮಾತನಾಡಿ, ಶಿವಶಂಕರರೆಡ್ಡಿ ಜನತೆಯ ಮೇಲೆ ವಿಶ್ವಾಸವಿಟ್ಟು ಜನಸೇವೆಯ ಮೂಲಕ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದರು.
ಡಿ.ಪಾಳ್ಯ ಹೋಬಳಿ ಮುಖಂಡ ಖಾದರ್​ ಸುಬಾನ್​ ಖಾನ್​ ಮಾತನಾಡಿ, ೇತ್ರದಲ್ಲಿ ಮಾಜಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಶಾಶ್ವತವಾಗಿವೆ ಎಂದರು.
ಜಿಪಂ ಮಾಜಿ ಸದಸ್ಯ ಅರುಂಧತಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಶ್ವತ್ಥನಾರಾಯಣ, ವೇದಲವೇಣಿ ವೇಣು, ಗಂಗಾಧರಪ್ಪ, ತಾರಾನಾಥ್​, ರಮೇಶ್​ ನಾಯಕ್​, ನಾಗೇಶ್​, ಎಸ್ಪಿ ಬ್ಲಾಕ್​ ಅಧ್ಯಕ್ಷ ಇಡಗೂರು ಸೋಮಯ್ಯ, ಮುಖಂಡರಾದ ಡಿ.ವಾಳ್ಯ ಆನಂದ್​ಕುಮಾರ್​, ಮರಳೂರು ಹನುಮಂತರೆಡ್ಡಿ, ಎಚ್​.ಎನ್​.ಪ್ರಕಾಶ್​ ರೆಡ್ಡಿ, ಆರ್​.ಪಿ.ಗೋಪಿನಾಥ್​, ಮೈಲಾರಪ್ಪ, ಎಂ.ಡಿ. ರಫೀಕ್​, ನಿರಂಜನ್​, ರೇಣುಕಮ್ಮ, ಲಕ್ಷ$್ಮಯ್ಯ, ದಿನೇಶ್​ರೆಡ್ಡಿ, ನವಿನ್​ ಇದ್ದರು.