ಮಲ್ಲಿಕಾರ್ಜುನ ಕಾಳಗಿ 
ರಾಜ್ಯ

ಶೀಘ್ರ ಬೆಂಗಳೂರಿಗೆ ಕಾಂಗ್ರೆಸ್​ ಮುಖಂಡರ ನಿಯೋಗ

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಕಾಳಗಿ ಹೇಳಿಕೆ
  • ನಾಗರೆಡ್ಡಿ ಪಾಟೀಲ್​ ಅವರನ್ನು ಎಂಎಲ್​ಸಿ ಮಾಡಲು ಮನವಿ
ಚಿತ್ತಾಪುರ: ಕಳೆದ ಎರಡು ದಶಕಕ್ಕೂ ಹೆಚ್ಚು ವರ್ಷ ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತನಾಗಿ ತಳಮಟ್ಟದಲ್ಲಿ ಪಕ್ಷ ಸಂಟಿಸುತ್ತಿರುವ ನಾಗರೆಡ್ಡಿ ಪಾಟೀಲ್​ ಅವರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಬೇಕು. ಈ ನಿಟ್ಟಿನಲ್ಲಿ 150ಕ್ಕೂ ಅಧಿಕ ಕಾಂಗ್ರೆಸ್​ ಮುಖಂಡರ ನಿಯೋಗ ಗುರುವಾರ ಬೆಂಗಳೂರಿಗೆ ತೆರಳಿ ನಾಯಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಕರದಾಳ ಅವರು ಜಿಪಂ ಸದಸ್ಯ, ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ದಿಗ್ಗಾಂವ್​ ಮಾದರಿ ಜಿಪಂ ಕ್ಷೇತ್ರವಾಗಿಸಿದ್ದಾರೆ. ಕೆಪಿಸಿಸಿ ಸದಸ್ಯರಾಗಿ ವಿಧಾನಸಭೆ, ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ ಸೇರಿ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಪ್ರಭಾವಿ ನಾಯಕರಾಗಿರುವ ನಾಗರೆಡ್ಡಿ ಪಾಟೀಲ್​ ಕರದಾಳ ಅವರಿಗೆ ಪಕ್ಷ ಸೂಕ್ತ ಸ್ಥಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಪ್ರಭುರಾಜ ಕಾಂತಾ, ಪುರಸಭೆ ಮಾಜಿ ಸದಸ್ಯ ವಿನೋದ ಗುತ್ತೇದಾರ್​, ಮುಖಂಡರಾದ ಚಂದ್ರಶೇಖರ ಸಾತನೂರ, ಎಸ್​.ಎನ್​.ಪಾಟೀಲ್​ ಮಾತನಾಡಿದರು.
ಪ್ರಮುಖರಾದ ಸುವನರೆಡ್ಡಿ ಪೋತರೆಡ್ಡಿ, ಶ್ಯಾಮ ಮುಸ್ತೆಜರ, ಶ್ರೀನಿವಾಸರೆಡ್ಡಿ ಪಾಲಪ, ಸಂತೋಷ ಚೌಧರಿ, ಶಿವರಾಜ ಪಾಳೇದ, ನಾಗೂ ಕಲ್ಲಕ್​, ಅನಿಲ ವಡ್ಡಡಗಿ, ರವಿ ಗೊಬ್ಬರ, ರವಿಸಾಗರ ಹೊಸಮನಿ, ನೀಲಕಂಠ ಮಲಕೂಡ, ಮಲ್ಲಿಕಾರ್ಜುನ ಹಿಪ್ಪರಗಿ ಇದ್ದರು.