ಸೇಡಂ ತಾಲೂಕಿನ ಮದನಾದಲ್ಲಿ ರಸ್ತೆ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಬಸವರಾಜ ಪಾಟೀಲ್ ಊಡಗಿ, ಮಹೆಮೂದ್ ಮದನಾ, ನಾಗೇಂದ್ರಪ್ಪ ಸಾಹುಕಾರ, ವೆಂಕಟಪ್ಪ ಜೋಶಿ ಇತರರಿದ್ದರು
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಮದನಾದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಸೇಡಂ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳೊಂದಿಗೆ ಸರ್ವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದು, ವಿವಿಧ ಜನರ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಮದನಾದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ 9.95ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ 21 ಕೋಟಿ ರೂ. ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, 2023ರಿಂದ ಗ್ಯಾರಂಟಿ ಯೋಜನೆ ಮೂಲಕ ಸರ್ಕಾರದ ಸಾವಿರಾರು ಕೋಟಿ ರೂ. ಹಣ ಲಾಂತರ ಕುಟುಂಬಗಳಿಗೆ ತಲುಪುತ್ತಿದೆ. ಮದನಾದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಕಾರ್ಮಿಕರ ಸಂದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್ ರಂಜೋಳ, ತಾಪಂ ಮಾಜಿ ಉಪಾಧ್ಯಕ್ಷ ಶರಣರೆಡ್ಡಿ ಕಡಚರ್ಲಾ, ಮಹೆಮೂದ ಮದನಾ ಮಾತನಾಡಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ್, ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ, ಎಇ ಗುರುಪ್ರಸಾದ, ತಾಪಂ ಇಒ ಚನ್ನಪ್ಪ ರಾಯಣ್ಣನವರ್, ತಾಪಂ ಮಾಜಿ ಸದಸ್ಯ ಸತ್ಯನಾರಾಯಣರೆಡ್ಡಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಾಜಕುಮಾರ ನಾಯಕ, ಗುತ್ತಿಗೆದಾರ ಸಿದ್ದಪ್ಪಗೌಡ, ಪ್ರಮುಖರಾದ ವೆಂಕಟೇಶ ನಾಡೇಪಲ್ಲಿ, ಮಹೆಮೂದ್ ಮದನಾ, ನಾಗೀಂದ್ರಪ್ಪ ಸಾಹುಕಾರ, ನಾರಾಯಣರೆಡ್ಡಿ ಶೇರಿಕಾರ, ಬಸವರಾಜಪ್ಪಗೌಡ ಮಲ್ಕಾಪಲ್ಲಿ, ರಮೇಶ ಕಂದೂರ, ವೆಂಕಟಪ್ಪ ಜೋಗಿ ಇತರರಿದ್ದರು.
ವಿದ್ಯುತ್ ವಿತರಣಾ ಕೇಂದ್ರ ಲೋಕಾರ್ಪಣೆ
ಮದನಾ ಗ್ರಾಮದಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 110/11 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಲೋಕಾರ್ಪಣೆಗೊಳಿಸಿದರು. ಕೆಪಿಟಿಸಿಎಲ್ ಮುಖ್ಯಅಭಿಯಂತರ ರಾಮಸ್ವಾಮಿ, ಅಧಿಕ್ಷಕ ಅಭಿಯಂತರ ರಾಮಚಂದ್ರ, ಕಾರ್ಯನಿರ್ವಹಕ ಅಭಿಯಂತರ ರಾಜೇಶ ಹಿಪ್ಪರಗಿ, ಎಇಇ ಮಲ್ಲಿಕಾರ್ಜುನ ಗುಂಡಗೋಳ, ದಯಾನಂದ, ನಿರ್ಮಾಣ ಕಂಪನಿಯ ಶ್ರೀನಿವಾಸ, ಪ್ರಹ್ಲಾದ್, ನಿಹಾಲ್ ಇದ್ದರು.