ಲೋಕಾಪುರ ಸಮೀಪ ಜಾಡರ ಅರಳಿಕಟ್ಟಿ, ಮಲ್ಲಾಪುರ ಗ್ರಾಮಗಳಿಗೆ ಸಚಿವ ವಿಜಯಾನಂದ ಕಾಶಪ್ಪನವರ ಮತ್ತು ಶಾಸಕ ಆರ್. ಬಿ. ತಿಮ್ಮಾಪೂರ ಭೇಟಿ ನೀಡಿ ರೈತರಿಂದ ಬೆಳೆ ಹಾನಿ ಮಾಹಿತಿ ಪಡೆದುಕೊಂಡರು. ಈ ವೇಳೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಮುಖಂಡರಾದ ಶಿವಾನಂದ್ ಉದಪುಡಿ, ಉದಯ ಸಾರವಾಡ, ರಾಜುಗೌಡ ಜಂಬಗಿ ಇದ್ದರು.
- ಕೃಷಿ ಪರಿಸ್ಥಿತಿ ವೀಕ್ಷಿಸಿದ ಸಚಿವ ಕಾಶಪ್ಪನವರ, ಶಾಸಕ ತಿಮ್ಮಾಪೂರ
- ಮುಂದುವರಿದ ಬರ ಅಧ್ಯಯನ
ಲೋಕಾಪುರ: ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮುಂದುವರಿಸಿದ ಸಚಿವ ವಿಜಯಾನಂದ ಕಾಶಪ್ಪನವರ, ಶಾಸಕ ಆರ್.ಬಿ. ತಿಮ್ಮಾಪೂರ ಜಂಟಿಯಾಗಿ ಶನಿವಾರ ಸಂಜೆ ಲೋಕಾಪುರ ಹೋಬಳಿಯ ಮಲ್ಲಾಪೂರ ಪಿ. ಎಲ್. ಹಾಗೂ ಜಾಡರರ ಅರಳಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ಪರಿಶೀಲಿಸಿದರು.
ಮಲ್ಲಾಪೂರ ಪಿ.ಎಲ್. ಗ್ರಾಮದ ರೈತ ಮೌಲಾಸಾಬ ಮುಲ್ಲಾ ಅವರ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಬೆಳೆ ಹಾಗೂ ಜಾಡರ ಅರಳಿಕಟ್ಟಿ ವ್ಯಾಪ್ತಿಯ ರೈತ ಪತ್ರಪ್ಪ ಹೊಸಕೋಟಿ ಅವರ ಜಮೀನಿನಲ್ಲಿ ಬೆಳೆಯಲಾದ ಹೆಸರು ಬೆಳೆ ಹಾನಿ ಪರಿಶೀಲನೆ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸಂಗಪ್ಪ ಎಂ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ. ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಧೋಳ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ, ಶಿವಾನಂದ ಉದಪುಡಿ, ಸಿದ್ದು ಕೊಣ್ಣೂರ, ಉದಯ ಸಾರವಾಡ, ರಾಜುಗೌಡ ಪಾಟೀಲ, ಗುರುರಾಜ ಉದಪುಡಿ ಇದ್ದರು.