ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರ ನೇಮಕ ಉಸ್ತುವಾರಿ ಜಟ್ಟಿ ಕುಸುಮಕುಮಾರ್ ಮಾತನಾಡಿದರು. ಪುಂಡಲೀಕರಾವ, ಶ್ರೀದೇವಿ, ಬಾಬುರಾವ್ ಚಿಂಚನಸೂರ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಬಸರೆಡ್ಡಿ ಅನಪುರ, ಶರಣಪ್ಪ ಮಾಗೇಗಾರ, ಸಾಯಬಣ್ಣ ಬೋರಬಂಡ ಇದ್ದರು.
- ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸುಮಕುಮಾರ್ ಹೇಳಿಕೆ
- ಗುರುಮಠಕಲ್‌ನಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ದೇಶದ ೨೫ ರಾಜ್ಯಗಳಲ್ಲಿ ಕಾಂಗ್ರೆಸ್ ಸಂಘಟನಾ ಸೃಜನ್ ಅಭಿಯಾನ ನಡೆಯುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ, ಯಾದಗಿರಿ ಜಿಲ್ಲಾಧ್ಯಕ್ಷರ ನೇಮಕ ಉಸ್ತುವಾರಿ ಜಟ್ಟಿ ಕುಸುಮಕುಮಾರ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅಭಿಯಾನದ ಮೂಲಕ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುತ್ತಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು, ಮುಖಂಡರಲ್ಲದೆ ರಾಜಕೀಯೇತರರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುವುದು. ಆ.೩೧ರೊಳಗೆ ಜಿಲ್ಲಾಧ್ಯಕ್ಷ ನೇಮಕ ನಡೆಯಲಿದೆ ಎಂದರು.
ಈವರೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ೨೦ಕ್ಕೂ ಹೆಚ್ಚು ಆಕಾಂಕ್ಷಿಗಳಿAದ ಅರ್ಜಿ ಸ್ವೀಕರಿಸಲಾಗಿದೆ. ಹಿರಿಯ ನಾಯಕ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸೇರಿ ಜಿಲ್ಲೆಯ ಮೂವರು ಶಾಸಕರ ಜತೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಪುಂಡಲೀಕರಾವ, ಕೆಪಿಸಿಸಿ ಕಾರ್ಯದರ್ಶಿ ಶ್ರೀದೇವಿ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷರಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಗುರುಮಠಕಲ್ ಉಸ್ತುವಾರಿ ರಾಜಗೋಪಾಲರೆಡ್ಡಿ, ಬಸರೆಡ್ಡಿ ಅನಪುರ, ಶರಣಪ್ಪ ಮಾನೇಗಾರ, ಸಾಯಬಣ್ಣ ಬೋರಬಂಡ, ಎಸ್.ಕೆ. ಮೈನೋದ್ದಿನ್, ಸಂಜೀವಕುಮಾರ ಚಂದಾಪುರ, ಸೈಯದ್ ಬಾಬಾ, ಚಾಂದಪಾಶಾ, ಬಾಬು ತಲಾರಿ, -Àಯಾಜ್ ಹೈಮದ್, ಚೇತನ್ ದಢಂಗೆ, ಮುರಳಿಧರ ಗಾಜರಕೋಟ ಇತರರಿದ್ದರು.