ಕೆ.ಆರ್.ಪೇಟೆ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಕುಮಾರ್ ಅವರಿಗೆ ಎಸ್‌ಡಿಎಂಸಿ, ಸಹ ಶಿಕ್ಷಕರು, ವಿದ್ಯಾರ್ಥಿಗಳ ವತಿಯಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು
- ನಿವೃತ್ತ ಸಹ ಶಿಕ್ಷಕ ಎಂ.ಕುಮಾರ್‌ಗೆ ಅಭಿನಂದನೆ
ಕೆ.ಆರ್.ಪೇಟೆ : ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಕುಮಾರ್ ಅವರನ್ನು ಎಸ್‌ಡಿಎಂಸಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಶನಿವಾರ ಸನ್ಮಾನಿಸಿ ಬೀಳ್ಕೊಟ್ಟರು.
ಸರ್ಕಾರಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ಎಂ.ಕುಮಾರ್ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ವೃಂದ, ಪಾಲಕರು ಹಾಗೂ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಶಿಕ್ಷಕ ಎಂ.ಕುಮಾರ್ ಮಾತನಾಡಿ, ಅಪಾರ ಜ್ಞಾನ ಮತ್ತು ಅನುಭವ ನೀಡಿರುವ ಶಿಕ್ಷಣ ಇಲಾಖೆಯು ಅಗಾಧವಾದದ್ದು, ಇಲಾಖೆಯಿಂದ ಹೆಚ್ಚು ಕಲಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಪ್ರಗತಿಗೆ ಶ್ರಮಿಸಿದ್ದೇನೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ವೃತ್ತಿ ಜೀವನ ತೃಪ್ತಿ ತಂದಿದೆ. ಈ ಶಾಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಅಧ್ಯಕ್ಷ ಸರ್ಕಾರಿ ನೌಕರರ ಸಂಘ ಆನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎಲ್.ಎಸ್. ಧರ್ಮಪ್ಪ, ಮಾಜಿ ಅಧ್ಯಕ್ಷರ ಪದ್ಮೇಶ್, ನಿರ್ದೇಶಕರಾದ ರವಿಕುಮಾರ್, ಶಿಕ್ಷಕರ ಪತ್ತಿನ ನೌಕರರ ಸಹಕಾರ ಸಂಘ ಅಧ್ಯಕ್ಷ ಎ.ಕೆ.ದೇವರಾಜ್, ನಿರ್ದೇಶಕ ಶಿವಕುಮಾರ್, ಶಿಕ್ಷಕರಾದ ಪಿ.ಜೆ.ಕುಮಾರ್, ಹರೀಶ್, ಎಸ್.ನಾರಾಯಣ್, ಆರ್.ಕೆ. ರಮೇಶ್, ಎಂ.ಡಿ. ಯೋಗೇಂದ್ರ, ಮಂಜು, ಮುಖ್ಯಶಿಕ್ಷಕ ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಶ್ ಸೇರಿದಂತೆ ಇತರರಿದ್ದರು.