ಯಾದಗಿರಿಯಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಎಡಿಸಿ ರಮೇಶ ಕೋಲಾರ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 
ರಾಜ್ಯ

ಪ್ರವೇಶ ಪರೀಕ್ಷೆ ಸೂಸುತ್ರವಾಗಿ ನಡೆಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ರಮೇಶ ಕೋಲಾರ ಸೂಚನೆ
  • ಜಿಲ್ಲೆಯಲ್ಲಿ 9 ಪರೀಕ್ಷಾ ಕೇಂದ್ರಗಳ ಸ್ಥಾಪನೆ
ಯಾದಗಿರಿ: ಇಂಜಿನಿಯರಿಂಗ್​ ಹಾಗೂ ಬಿಎಸ್ಪಿ ಪದವಿ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀೆ ಏ.23 ಮತ್ತು 24ರಂದು ಜಿಲ್ಲೆಯಲ್ಲಿ ನಡೆಯಲಿದ್ದು, ಈ ಪರೀೆ ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಪರೀೆ ಅಂದು ಬೆಳಗ್ಗೆ ಮತ್ತು ಮಧ್ಯಾಹ್ನ 2 ಅವಧಿಗಳಲ್ಲಿ ನಡೆಯಲಿವೆ. ಜಿಲ್ಲೆಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀೆಗೆ 9 ಪರೀಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಯಾದಗಿರಿ ನಗರದ ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಸಭಾ ಪಪೂ ಕಾಲೇಜು, ಎಲ್​ಕೆಇಟಿ ಪಪೂ ಕಾಲೇಜು, ಜವಹಾರ ಪದವಿಪೂರ್ವ ಕಾಲೇಜು, ಪಪೂ ಕಾಲೇಜು, ಬಾಲಕೀಯರ ಸರ್ಕಾರಿ ಪಪೂ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಬಾಲಕೀಯರ),ಆರ್​ವಿಪಪೂ ಕಾಲೇಜು ಹೀಗೆ ಒಟ್ಟು 9 ಪರೀೆ ಕೇಂದ್ರಗಳಲ್ಲಿ 4049 ಅಭ್ಯರ್ಥಿಗಳು ಈ ಪರೀೆ ಬರೆಯಲಿದ್ದಾರೆ. ಹೀಗಾಗಿ ಪರೀಾ ಕೇಂದ್ರಗಳ ಉಪ ಮುಖ್ಯಅಧೀಕರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರು ತಮ್ಮ ಕೇಂದ್ರದಲ್ಲಿ ಪೂರ್ವ ಸಿದ್ಧತೆ ಕೈಗೊಂಡು (ಆಸನ ವ್ಯವಸ್ಥೆ, ನೀರು, ಇತ್ಯಾದಿ) ವ್ಯವಸ್ಥೆ ಮಾಡುವಂತೆ ಅವರು ತಾಕೀತು ಮಾಡಿದರು.
ಪರೀೆ ಕೇಂದ್ರದ ಸುತ್ತಲೂ 200 ಮೀಟರ್​ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ೂಷಿಸಲು ಜಿಲ್ಲಾಧಿಕಾರಿಗಳನ್ನು ಕೊರಲಾಗಿದೆ ಎಂದು ಅವರು ತಿಳಿಸಿದರು. ಕೊಠಡಿ ಮೇಲ್ವಿಚಾರಕರ ತರಬೇತಿ ಆಯಾ ಕೇಂದ್ರದಲ್ಲಿ ಏ.22ರೊಳಗೆ ಕೈಗೊಳ್ಳುವಂತೆ ಕೇಂದ್ರದ ಉಪಮುಖ್ಯ ಅಧೀಕರಿಗೆ ತಿಳಿಸಿದ ಅವರು, ಗೌಪ್ಯ ಸಾಮಗ್ರಿಗಳನ್ನು ನೀಡುವಾಗ ಮತ್ತು ಪಡೆಯುವಾಗ ಪರೀೆ ಕೇಂದ್ರದ ಉಪ ಮುಖ್ಯ ಅದೀಕರು ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿಗಳಿಂದ ನೇಮಿಸಲ್ಪಟ್ಟ ಗ್ರೂಪ್​ ಬೆಲ್​ ಟೈಮಿಂಗ್ಟನ್​ ಮಾಹಿತಿಗಳನ್ನು ಕೊಠಡಿ ಮೇಲ್ವಿಚಾರಕರಿಗೆ ತರಬೇತಿಯಲ್ಲಿ ವಿಶೇಷವಾಗಿ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ಪರೀಾ ಕೇಂದ್ರದಲ್ಲಿ ಯಾವುದೇ ತರಹದ ಕೈ ಗಡಿಯಾರ ಧರಿಸದಂತೆ ಮತ್ತು ಯಾವುದೇ ಕ್ಯಾಲ್ಕುಲೇಟರ್​ ಬಳಸವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಕೋಣೆಯಲ್ಲಿ 24 ವಿದ್ಯಾರ್ಥಿಗಳು
ಮಾಹಿತಿ ಕೈಪಿಡಿಯಲ್ಲಿನ ಅಂಶಗಳಂತೆ, ಪರೀೆಗಳನ್ನು ಸುಸೂತ್ರವಾಗಿ ಕೈಗೊಳ್ಳಬೇಕು. ಪ್ರತಿ ಕೊಣೆಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಪರೀೆ ನಡೆಯುವ ವೇಳೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳುವುದು ಕೊಠಡಿ ಮೇಲ್ವಿಚಾರಕ ಜವಾಬ್ದಾರಿ. ಆದ್ದರಿಂದ ಅಭ್ಯರ್ಥಿಯ ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಿ ಹಾಜರಾಗಿರುವ ಅಭ್ಯರ್ಥಿಯನ್ನು ತಾಳೆ ಮಾಡಿಕೊಳ್ಳಲು ಕೊಠಡಿ ಮೇಲ್ವಿಚಾರಕರಿಗೆ ನಿರ್ದೇಶನ ನೀಡುವಂತೆ ಅವರು ಸೂಚಿಸಿದರು.
ಕೊಠಡಿ ಮೇಲ್ವಿಚಾರಕರಿಗೆ ನಿರ್ದೇಶನ
ಅಭ್ಯರ್ಥಿಗಳು ನಿಗದಿತ ಆಸನದಲ್ಲಿಯೇ ಕುಳಿತು ಪರೀೆ ಬರೆಯುತ್ತಿರುವ ಬಗ್ಗೆ ತಾಳೆ ಮಾಡಿಕೊಳ್ಳಲು ಕೊಠಡಿ ಮೇಲ್ವಿಚಾರಕರಿಗೆ ನಿರ್ದೇಶನ ನೀಡಬೇಕು. ಓಎಂಆರ್​ ಉತ್ತರ ಪತ್ರಿಕೆಗಳನ್ನು ಮತ್ತು ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ರೀತಿಯಲ್ಲಿ ಅಭ್ಯರ್ಥಿಗಳಿಗೆ ವಿತರಿಸುವುದು ಹಾಗೂ ಕೋಠಡಿ ಮೇಲ್ವಿಚಾರಕರು ಓಎಂಆರ್​ ಉತ್ತರ ಪತ್ರಿಕೆಯಲ್ಲಿ ನಿಗದಿತ ಜಾಗದಲ್ಲಿ ತಪ್ಪದೆ ಸಹಿ ಹಾಕಲು ಕೊಠಡಿ ಮೇಲ್ವಿಚಾರಕರಿಗೆ ನಿರ್ದೇಶನ ನೀಡಬೇಕು. ಈ ಪರೀೆಗೆ ಗೈರುಹಾಜರಾಗುವ ವಿದ್ಯಾರ್ಥಿಗಳ ವಿವರವನ್ನು ದಾಖಲಿಸಲು ಕ್ರಮಕೈಗೊಳ್ಳಬೇಕು ಎಂದು ಎಸಿಡಿ ರಮೇಶ ಕೋಲಾರ ಸೂಚಿಸಿದರು.