ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಲಿಖಿತ ಪರೀಕ್ಷೆ ಹಿನ್ನೆಲೆಯಲ್ಲಿ ಕಲಬುರಗಿ ಡಿಸಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಮಾತನಾಡಿದರು. ಡಿಸಿ ಇಕ್ರಮ್ ಶರೀಫ್, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲು ಇತರರಿದ್ದ
- ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ
- ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ 2ಕ್ಕೆ
ಕಲಬುರಗಿ: ಕರ್ನಾಟಕ ಪರೀಾ ಪ್ರಾಧಿಕಾರದಿಂದ ಪೊಲೀಸ್ ಇಲಾಖೆಯ ಸಿವಿಲ್ ಪೇದೆ ಹುದ್ದೆ ನೇಮಕಕ್ಕೆ ಆ.2ರಂದು ನಗರದ ಸುಮಾರು 40 ಕೇಂದ್ರಗಳಲ್ಲಿ ಲಿಖಿತ ಪರೀೆ ನಡೆಯಲಿದೆ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದೆ ಶಾಂತಿಯುತ, ನ್ಯಾಯಸಮ್ಮತ ಪರೀೆ ನಡೆಸಬೇಕು ಎಂದು ಕೇಂದ್ರದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಅಂದು ಬೆಳಗ್ಗಿನ ಅವಧಿಯ ಪರೀೆಗೆ 15,702 ಮತ್ತು ಮಧ್ಯಾಹ್ನ 14,370 ಅಭ್ಯರ್ಥಿಗಳು ಪರೀೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಪರೀೆಗೆ ಮುನ್ನವೇ ಕೇಂದ್ರದ ಮುಖ್ಯಸ್ಥರು ಕೇಂದ್ರಕ್ಕೆ ಭೇಟಿ ನೀಡಿ ಕೊಠಡಿಯಲ್ಲಿನ ಗಾಳಿ&ಬೆಳಕು, ವಿದ್ಯುತ್, ಮೇಜು, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಲಭ್ಯ ಖಾತ್ರಿಪಡಿಸಿಕೊಳ್ಳಬೇಕು. ಪರೀೆ ಸುಸೂತ್ರ ನಡೆಯಲು ಪ್ರತಿ ಕೇಂದ್ರಕ್ಕೆ ವೀಕ್ಷಕರು, ಜಾಗೃತ ದಳ ಸದಸ್ಯರನ್ನು ನಿಯೋಜಿಸಲಾಗಿದೆ. ಬಿಗಿ ಭದ್ರತೆಯಲ್ಲಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಸಾಗಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೊಬೈಲ್, ಬ್ಲೂಟೂಥ್, ಮೈಕ್ರೋಚಿಪ್, ಗಡಿಯಾರ, ಇಯರ್ ಫೋನ್, ಪೇಜರ್, ಕ್ಯಾಲಕುಲೇಟರ್ನಂಥ ಇಲೆಕ್ಟ್ರಾನಿಕ್ ಸಾಧನ ಮತ್ತು ಪಠ್ಯ ಸಾಮಗ್ರಿಗಳನ್ನು ಕೇಂದ್ರಕ್ಕೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಎಂದು ೂಷಿಸಲಾಗುವುದು ಎಂದರು.
ಸಾರ್ವಜನಿಕ ಪರೀೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ&2024ರ ಪ್ರಕಾರ ಯಾವುದೇ ವ್ಯಕ್ತಿ ನ್ಯಾಯಸಮ್ಮತ ಪರೀೆ ನಡೆಸುವಲ್ಲಿ ನಿಷ್ಕಾಳಜಿ ಮತ್ತು ಅಕ್ರಮಕ್ಕೆ ಸಹಕಾರ ನೀಡಿದಲ್ಲಿ 5 ವರ್ಷ ಶಿೆಗೆ ಅವಕಾಶವಿದೆ. ಇತ್ತೀಚಿನ ನೀಟ್ ಪರೀೆ ಹಿನ್ನೆಲೆಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು 10 ವರ್ಷದ ಗರಿಷ್ಠ ಶಿೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಹೇಳಿದರು.
ಅಭ್ಯರ್ಥಿಯ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಪೊಲೀಸರು ಫ್ರಿಸ್ಕಿಂಗ್ ಮಾಡಬೇಕು. ಪ್ರತಿ ಅಭ್ಯರ್ಥಿ ಎಐ ಆಧಾರಿತ ಮುಖ ಚಹರೆ ತೋರಿಸಿ ಕೇಂದ್ರದೊಳಗೆ ಪ್ರವೇಶಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲು, ಶಾಲಾ ಶಿಕ್ಷಣ (ಪದವಿಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ್ ಇತರರಿದ್ದರು.
ದೇಶದಲ್ಲಿ ನಡೆದ ಪರೀೆಯಲ್ಲಿನ ಅಕ್ರಮಗಳು ನಮ್ಮ ಮುಂದಿವೆ. ಅಭ್ಯರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿ ಪರೀೆಗೆ ಸಿದ್ಧರಾಗಿರುತ್ತಾರೆ. ಹೀಗಾಗಿ ಪರೀೆಯಲ್ಲಿ ಯಾವುದೇ ಹಂತದಲ್ಲಿ ನಕಲು, ಅಕ್ರಮ ಅವರಲ್ಲಿ ಹತಾಶೆ ಭಾವನೆ ಉಂಟು ಮಾಡುತ್ತದೆ. ಹೀಗಾಗಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದು. ಪ್ರಶ್ನೆಪತ್ರಿಕೆ ತೆರೆಯುವುದರಿಂದ ಹಿಡಿದು ಪರೀೆ ಪ್ರಕ್ರಿಯೆ ಮುಗಿಯುವವರೆಗೆ ಸಿಸಿ ಟಿವಿ ಕಣ್ಗಾವಲು ಇರಿಸಬೇಕು. ವೆಬ್ಕಾಸ್ಟಿಂಗ್ ಮೂಲಕ ಪ್ರತಿ ಕೇಂದ್ರದ ಮೇಲೆ ಸರ್ಕಾರ ನಿಗಾ ವಹಿಸಿದೆ. ಯಾವುದೇ ಅಹಿತಕರ ಟನೆ ನಡೆದಲ್ಲಿ ಸಂಬಂಧಿಸಿದ ಕೇಂದ್ರದ ಮುಖ್ಯಸ್ಥರು ಹೊಣೆ ಎಂಬುದನ್ನು ಮರೆಯಬಾರದು ಎಂದು ಡಿಸಿ ಇಕ್ರಮ್ ಶರೀಫ್ ಎಚ್ಚರಿಸಿದರು.
"
ಅಭ್ಯರ್ಥಿಗಳು ಉದ್ದು ತೋಳಿನ ಡ್ರೆಸ್ ಧರಿಸಿ ಪರೀೆಗೆ ಹಾಜರಾಗಬಾರದು. ಕಿವಿ, ತಲೆ, ಮುಖ ಮುಚ್ಚುವಂತಹ ಯಾವುದೇ ಉಡುಪು ಧರಿಸಬಾರದು. ಮೂಗುತಿ, ಮಂಗಳಸೂತ್ರ ಹೊರತುಪಡಿಸಿ ಯಾವುದೇ ಆಭರಣ, ಲೋಹದ ವಸ್ತುಗಳನ್ನು ಧರಿಸುವಂತಿಲ್ಲ. ಶೂ ಹಾಕಿಕೊಳ್ಳುವಂತಿಲ್ಲ. ಆದರೆ ಕಡಿಮೆ ಹಿಮ್ಮಡಿಯಿರುವ ಸ್ಯಾಂಡಲ್ ಧರಿಸಬಹುದು.
— > ಡಾ.ಎಸ್.ಡಿ.ಶರಣಪ್ಪ ನಗರ ಪೊಲೀಸ್ ಆಯುಕ್ತ