ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಗಾಳಿ&ಮಳೆಗೆ ಹಾಳದ ಬಾಳೆ ತೋಟಗಳಿಗೆ ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಭೇಟಿ ನೀಡಿ ಪರಿಶೀಲಿಸಿದರು. ಸಂಜೀವಕುಮಾರ ದಾಸರ, ಸಿದ್ಧಾರ್ಥ ಬಸರಿಗಿಡ, ಸಿದ್ರಾಯ ಅಳ್ಳೊಳ್ಳಿ ಇತರರಿದ್ದರು. 
ರಾಜ್ಯ

ಸಮರ್ಪಕ ಸಮೀಕ್ಷೆ ನಡೆಸಿ ವರದಿ ಕೊಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಸೂಚನೆ
  • ಗಾಳಿ-ಮಳೆ ಹಾನಿ ಪ್ರದೇಶಕ್ಕೆ ಭೇಟಿ
ಅಫಜಲಪುರ: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನಾಶವಾಗಿದ್ದು, ಸರಿಯಾದ ಸಮೀಕ್ಷೆ ನಡೆಸುವುದರ ಜತೆಗೆ ರೈತರಿಗೆ ಸೂಕ್ತ ಪರಿಹಾರ ಕೊಡುವ ಕೆಲಸ ಆಗಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿದರು.
ಬಳೂರಗಿ, ಚಿಂಚೋಳಿ ಗ್ರಾಮದಲ್ಲಿ ಗಾಳಿ&ಮಳೆಯಿಂದ ಹಾಳಾದ ಬಾಳೆ ತೋಟಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಫಜಲಪುರ, ಬಳೂರಗಿ, ಚಿಂಚೋಳಿ, ಬಡದಾಳ, ಕರಜಗಿ, ಮಾಶಾಳ, ಗೌರ ಗ್ರಾಮಗಳಲ್ಲಿ ಸುಮಾರು 20 ಹೆಕ್ಟೇರ್​ಗೂ ಅಧಿಕ ಬಾಳೆ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಗೊನೆ ಸಮೇತ ಬಾಳೆ ಗಿಡಗಳು ಮುರಿದು ಬಿದ್ದಿದ್ದು, ರೈತರು ಕಂಗಾಲಾಗಿದ್ದಾರೆ. ರೈತರ ಸಂಕಷ್ಟ ನೋಡಿದರೆ ಮನಸ್ಸು ಮರುಗುತ್ತಿದೆ. ಯಾರೂ ಕಂಗಾಲಾಗಬಾರದು. ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಣ ಜಂಟಿ ಸಮೀೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ತಹಸೀಲ್ದಾರ್​ ಸಂಜೀವಕುಮಾರ ದಾಸರ, ಜಿಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ತೋಟಗಾರಿಕೆ ಅಧಿಕಾರಿ ಸಿದ್ರಾಯ ಅಳ್ಳೊಳ್ಳಿ, ಪಿಕೆಪಿಎಸ್​ ಅಧ್ಯ ಅಣವೀರಯ್ಯ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಹುದಲೂರ ಇತರರಿದ್ದರು.
"

ತಾಲೂಕಿನಾದ್ಯಂತ ಈಗಾಗಲೇ 35 ರೈತರು ದೂರು ದಾಖಲಿಸಿದ್ದು, ಜಂಟಿ ಸರ್ವೇ ಮುಗಿದಿದೆ. ತೋಟಗಾರಿಕೆ, ತರಕಾರಿ, ಬಹುವಾರ್ಷಿಕ ಬೆಳೆಗಳು ಹಾಳಾದರೆ 24 ಗಂಟೆಯಲ್ಲಿ ತೋಟಗಾರಿಕೆ ಇಲಾಖೆ ಸಹಾಯವಾಣಿ / ತೋಟಗಾರಿಕೆ ಇಲಾಖೆಯ ಅಫಜಲಪುರ ಹೋಬಳಿ ಅಧಿಕಾರಿ ಸಿದ್ರಾಯ ಅಳ್ಳೊಳ್ಳಿ (ಮೊ.7337651815), ಕರಜಗಿಯ ಸಕಲೇಶ ಪಾಟೀಲ್​ (ಮೊ.7760103701), ಅತನೂರಿನ ಜಟ್ಟೆಪ್ಪ ದೊಡ್ಡಮನಿ (ಮೊ.9632217876) ಅವರಿಗೆ ದೂರು ಸಲ್ಲಿಸಬೇಕು.

— > ಶಂಕರಗೌಡ ಪಾಟೀಲ್​, ಹಿರಿಯ ನಿರ್ದೇಶಕ, ತೋಟಗಾರಿಕೆ ಇಲಾಖೆ