Condemnation of derogatory remarks against Supreme Court judge 
ರಾಜ್ಯ

ಸುಪ್ರೀಂ ನ್ಯಾಯಾಧೀಶರ ವಿರುದ್ಧ ಕೀಳುಮಟ್ಟದ ಹೇಳಿಕೆಗೆ ಖಂಡನೆ

ಕೋಲಾರ: ಮುಳಬಾಗಿಲು ತಾಲೂಕು ಅಹಿಂದ ಚಳವಳಿ ನಾಯಕನೆಂದು ೂಷಿಸಿಕೊಂಡಿರುವ ಮುನಿವೆಂಕಟೇಗೌಡ ಎಂಬಾತ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಾಮೂರ್ತಿಗಳ ವಿರುದ್ಧ ತುಚ್ಚವಾಗಿ ನೀಡಿರುವ ಹೇಳಿಕೆ ಖಂಡಿಸಿ ಹಾಗೂ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಗುರುವಾರ ವಕೀಲರ ಸಂದಿಂದ ಡಿವೈಎಸ್​ಪಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂದ ಅಧ್ಯಕ್ಷ ಎಲ್​.ಶ್ರೀನಿವಾಸ್​ ನೇತೃತ್ವದಲ್ಲಿ ವಕೀಲರು ಪ್ರತಿಭಟನೆ ನಡೆಸಿ ಡಿವೈಎಸ್​ಪಿ ಅವರಿಗೆ ಮನವಿ ಸಲ್ಲಿಸಿ, ಆರೋಪಿ ಕೇಂದ್ರ ಸರ್ಕಾರ ಟೀಕಿಸುವ ಬರದಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಕೀಳಾಗಿ ಮಾತನಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಆಶಾಂತಿಗೆ ಕಾರಣವಾಗುವುದಲ್ಲದೇ, ದೇಶದ ನ್ಯಾಯಾಂಗ ವ್ಯವಸ್ಥೆ ಕುರಿತು ಜನರಲ್ಲಿನ ಗೌರವ ಹಾಳು ಮಾಡುವ ಹುನ್ನಾರ ಇದಾಗಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವುದು ಅಗತ್ಯ ಎಂದರು.
ವಕೀಲರ ಸಂದ ನಿಕಟಪೂರ್ವ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಭಾರತದ ಸಂವಿಧಾನದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ನತೆ, ಗೌರವವಿದೆ, ನ್ಯಾಯಮೂರ್ತಿ ವಿರುದ್ಧವೇ ಮಾತನಾಡುವ ಮೂಲಕ ಸಮಾಜದಲ್ಲಿ ನ್ಯಾಯಾಂಗದ ಮೇಲಿನ ಗೌರವ ಹಾಳು ಮಾಡುವ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದರು.
ಮಂಜುನಾಥ್​,ಎನ್​.ಕೆ.ನಂಜುಂಡಗೌಡ, ಅಂಬರೀಷ್​, ನಾಗೇಶ್​,ಸಿದ್ದಾರ್ಥ, ರಾಜ್​ಕುಮಾರ್​,ಶ್ರೀನಿವಾಸ್​, ಜಿ.ಕೆ.ಲೋಕೇಶ್​,ಹರೀಶ್​,ಶೇಖರ್​,ನಾರಾಯಣಸ್ವಾಮಿ, ಅಶ್ವಥ್ಥ್​, ಶ್ರೀಕಾಂತ್​,ಟಿ.ಎಸ್​.ನಾಗೇಂದ್ರ,ಸದಾಶಿವಚಾರಿ, ಅವಿನಾಶ್​, ಅಶೋಕ್​ ಇದ್ದರು.