ಆಟೋ strike ಗ್ಯಾಸ್​ ದರ ಏರಿಕೆ ಖಂಡಿಸಿ ಬಂಕ್​ ವಿರುದ್ಧ ಆಟೋ ಚಾಲಕರು ಮುಷ್ಕರ ನಡೆಸಿದರು. 
ರಾಜ್ಯ

ಆಟೋ ಗ್ಯಾಸ್​ ದರ ಏರಿಕೆಗೆ ಖಂಡನೆ strike

ಗುಬ್ಬಿ: ಏಕಾಏಕಿ ಆಟೋ ಗ್ಯಾಸ್​ ದರ ಏರಿಕೆಯಾಗಿದ್ದು, ಬೆಳಗ್ಗೆ ಒಂದು ಬೆಲೆ ಸಂಜೆ ಒಂದು ಬೆಲೆ strike ಕೇಳಿದರೆ ನಿಮಗೆ ಗ್ಯಾಸ್​ ನೀಡುವುದಿಲ್ಲ ಎನ್ನುವ ಸ್ಥಳಿಯ ಗೋಗ್ಯಾಸ್​ ಬಂಕ್​ ವಿರುದ್ಧ ಸಂಜೆ ಆಟೋ ಚಾಲಕರು ಸೋಮವಾರ ಮುಷ್ಕರ ನಡೆಸಿದರು.
ಬಂಕ್​ ಬಳಿ ಜಮಾಯಿಸಿದ ಗ್ಯಾಸ್​ ಆಟೋ ಮಾಲೀಕರು ಮತ್ತು ಚಾಲಕರು 30 ರೂ. ಏರಿಕೆ ಮಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಗ್ರಾಹಕರ ಬಳಿ ಹೆಚ್ಚು ಹಣ ಕೇಳಿದರೆ ನಿತ್ಯ ಜಗಳ ಮಾಡಿಕೊಳ್ಳುವ ದುಸ್ಥಿತಿ ಎದುರಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡರು.
ಗುಬ್ಬಿ ಆಟೋ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಲಕ್ಕೇಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಿಂದ ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿ ಜೀವನ ಮಾಡುವಷ್ಟು ದುಡ್ಡು ಸಿಗದೆ ಇದ್ದರೂ ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದೆವು. ಆದರೆ ಈ ಗೋಗ್ಯಾಸ್​ ಸಂಸ್ಥೆ ಅವರು ಯುದ್ಧದ ನೆಪವೊಡ್ಡಿ ಒಂದು ತಿಂಗಳಲ್ಲಿ ಹಲವಾರು ಬಾರಿ ಗ್ಯಾಸ್​ ದರ ಏರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ 40 ರೂ. ಗಳಿಗಿಂತ ಹೆಚ್ಚು ಹಣ ಗ್ರಾಹಕರಿಂದ ಪಡೆಯಲು ಸಾಧ್ಯವಾಗದು. ಇಂತಹ ಸನ್ನಿವೇಶದಲ್ಲಿ ನಾವು ಬೆಲೆ ಏರಿಕೆ ಮಾಡಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿರುವ ಗೋಗ್ಯಾಸ್​ ಸಂಸ್ಥೆ ಅವರು ನಮಗೆ ಹೇಳುವುದು ನಮಗೆ ಯಾವುದೇ ದರ ನಿಗದಿಯ ನಿರ್ದೇಶನಗಳಿಲ್ಲ. ಸರ್ಕಾರ ಆ ರೀತಿ ಏನಾದರೂ ಮಾಡುವುದಿದ್ದರೆ ನಮಗೆ ನೋಟಿಸ್​ ನೀಡಲಿ ನಾವು ಅದಕ್ಕೆ ಉತ್ತರಿಸುತ್ತೇವೆ ಎಂದು ಕಂಪನಿಯ ಜನರಲ್​ ಮ್ಯಾನೇಜರ್​ ದೂರವಾಣಿ ಮೂಲಕ ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕಿ ವೀಣಾ ಮುಷ್ಕರ ನಿರತರನ್ನು ಭೇಟಿ ಮಾಡಿ ಬಂಕ್​ನ ಸಿಬ್ಬಂದಿ ಜತೆ ಚರ್ಚಿಸಿ ನೀವು ಮನಸ್ಸೋಇಚ್ಛೆ ಬೆಲೆ ಏರಿಸುವಂತಿಲ್ಲ. ಹಾಗೇನಾದರೂ ಬೆಲೆ ಹೆಚ್ಚು ಮಾಡಬೇಕಿದ್ದರೆ ಸಂಸ್ಥೆ ಆದೇಶ ಮಾಡಬೇಕು ಎಂದರು.
ವೃಥಾ ಸುಮ್ಮನೆ ಗ್ಯಾಸ್​ ಬೆಲೆ ಹೆಚ್ಚು ಮಾಡಿರುವ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.