Computer knowledge is essential for students. 
ರಾಜ್ಯ

ವಿದ್ಯಾರ್ಥಿಗಳಿಗೆ ಕಂಪ್ಯೂಟರ್​ ಜ್ಞಾನ ಅವಶ್ಯ

ತುಮಕೂರು ಡೆಸ್ಕ್
ಕುಣಿಗಲ್​: ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಗಣಕಯಂತ್ರ ಆವರಿಸಿದ್ದು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲ್ಲೇ ಕಂಪ್ಯೂಟರ್​ ಕೌಶಲ ಬೆಳೆಸುವುದು ಅಗತ್ಯವಾಗಿದೆ ಎಂದು ರೆಟ್ಜಲ್​ ಇಂಡಿಯಾ ಸಂಸ್ಥೆಯ ನಿರ್ದೇಶಕ ಪ್ಯಾಟ್ರಿಸ್​ ಜನವರಿನ್​ ಹೇಳಿದರು.
ತಾಲೂಕು ಯಲಿಯೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ರೆಟ್ಜಲ್​ ಇಂಡಿಯಾ ಸಂಸ್ಥೆಯ ಸಿಎಸ್​ಆರ್​ ಯೋಜನೆಯಡಿ 5 ಗಣಕಯಂತ್ರಗಳನ್ನು ಕೊಡುಗೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಯೋಜನೆಗಳು ಹೆಚ್ಚಾಗಲಿದೆ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಜತೆಗೆ ಕಂಪ್ಯೂಟರ್​ ಜ್ಞಾನ ಬೆಳೆಸುವ ಕೆಲಸವನ್ನು ಮಾಡಬೇಕಿದೆ. ವಿದ್ಯಾರ್ಥಿಗಳು ಗಣಕಯಂತ್ರಗಳ ಸೌಲಭ್ಯವನ್ನು ಪಡೆದುಕೊಂಡು ಬೌದ್ಧಿಕ ಮೌಲ್ಯ ಹೆಚ್ಚಿಸಿಕೊಳ್ಳಿ ಎಂದರು.
ತಾಂತ್ರಿಕತೆ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ರಂಗರಾಜು ಮಾತನಾಡಿ, ಹಿಂದೆಲ್ಲಾ ಕಂಪ್ಯೂಟರ್​ ಶಿಕ್ಷಣ ಎಂದರೆ ಪದವಿಯ ನಂತರವೇ ಸಿಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್​ ಬಳಕೆ ಹೆಚ್ಚಾಗಿದ್ದು ಅದರ ಕುರಿತಾದ ಶಿಣ ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ ಸೀನಯ್ಯ, ಸಿಆರ್​ಪಿ ಶಶಿಕಲಾ, ಶಿಣ ಸಂಯೋಜಕ ಸೋಮಶೇಖರ್​, ರೆಟ್ಜಲ್​ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಪ್ರತಿಮಾ, ಉಪಾಧ್ಯ ಸಂಜೀವ್​.ಆರ್​.ಪಾಟೀಲ್​, ಸಂಪನ್ಮೂಲ ಅಧಿಕಾರಿ ಮೋಹನ್​ಕುಮಾರ್​, ವ್ಯವಸ್ಥಾಪಕ ರಂಗರಾಜು, ಮುಖಂಡರಾದ ಬಸವಕುಮಾರ್​, ಮಲ್ಲೇಶ್ವರರಾಮ್​, ಸೋಮಶೇಖರ್​ ಇತರರಿದ್ದರು.