ಕಲಬುರಗಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಮಂಗಳವಾರ ಆಯೋಜಿಸಿದ್ದ 371(ಜೆ) ದಶಮಾನದ ಅವಲೋಕನ ಕಾರ್ಯಾಗಾರವನ್ನು ಹೋರಾಟಗಾರ ಲಕ್ಷ$್ಮಣ ದಸ್ತಿ ಉದ್ಘಾಟಿಸಿದರು. ಡಾ.ಇಂದುಮತಿ ಪಾಟೀಲ್​, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಶಿವಶರಣಪ್ಪ ಮುಳೆಗಾಂವ್​, ಡಾ.ರಜಾಕ್​ ಉಸ್ತಾದ್​, ಡಾ.ನಾಗಪ್ಪ ಗೋಗಿ, ಡಾ.ಶ್ರೀಮಂತ ಹೋಳ್ಕರ್​ ಇತರರಿದ್ದರು. 
ರಾಜ್ಯ

371(ಜೆ) ಇತಿಹಾಸ ಸಮಗ್ರ ಮಾಹಿತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಕಕ ಹೋರಾಟ ಸಮಿತಿ ಅಧ್ಯಕ್ಷ ದಸ್ತಿ ಹೇಳಿಕೆ
  • ಸರ್ಕಾರಿ ಕಾಲೇಜಿನಲ್ಲಿ ದಶಮಾನದ ಅವಲೋಕನ ಕಾರ್ಯಾಗಾರ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಶರಣ, ಸೂಫಿ ಮತ್ತು ದಾಸ ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. 371(ಜೆ) ಅವಲೋಕಿಸುವಾಗ ಈ ಭಾಗದ ಇತಿಹಾಸವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯ ಲಕ್ಷ್ಮಣ ದಸ್ತಿ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಹಾಗೂ ಪ್ರಾ ಕಾನೂನು ಸಲಹಾ ಸಮಿತಿ ಸಹಯೋಗದಡಿ ಮಂಗಳವಾರ ಆಯೋಜಿಸಿದ್ದ 371(ಜೆ) ದಶಮಾನದ ಅವಲೋಕನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 1998ರಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಸಂದರ್ಭದಲ್ಲಿ ಅಂದಿನ ಕೇಂದ್ರ ಸಚಿವ ಲಾಲ್​ಕೃಷ್ಣ ಅಡ್ವಾಣಿ ಬಳಿ 371(ಜೆ) ವಿಶೇಷ ಸ್ಥಾನಮಾನದ ಬೇಡಿಕೆ ಮುಂದಿಟ್ಟಿದ್ದೆವು. ಅಂದಿನ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದಿಂದ ಒಪ್ಪಿಗೆ ದೊರೆಯಲಿಲ್ಲ ಎಂದು ವಿಷಾದಿಸಿದರು.
ಚಿಂತಕ ಡಾ.ರಜಾಕ್​ ಉಸ್ತಾದ್​ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಚ್​.ಕೆ. ಪಾಟೀಲ್​ ನೇತೃತ್ವದಲ್ಲಿ 371(ಜೆ) ನಿಯಮಾವಳಿ ರೂಪಿಸಲು ಸಮಿತಿ ರಚಿಸಲಾಗಿತ್ತು. ಉದ್ಯೋಗ ಮತ್ತು ಶಿಣದಲ್ಲಿ ಮೀಸಲಾತಿ, ಖಾಸಗಿ ಶಿಣ ಸಂಸ್ಥೆಗಳಲ್ಲಿ ಮೀಸಲಾತಿ ಮತ್ತು ಕಕ ಅಭಿವೃದ್ಧಿ ಸೇರಿ ಹಲವು ಪ್ರಮುಖ ಅಂಶಗಳನ್ನು ನಿಯಮಾವಳಿ ಒಳಗೊಂಡಿತ್ತು. ಕಕದಲ್ಲಿ ಶೇ.70 ಸೀಟು ಸ್ಥಳಿಯರಿಗೆ, ಉಳಿದದ್ದು ಮುಕ್ತ ವರ್ಗಕ್ಕೆ ಸೇರಿವೆ. ಇದರ ಸಂಪೂರ್ಣ ಪ್ರಯೋಜನ ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೋರಾಟಗಾರ್ತಿ ಕೆ.ನೀಲಾ ಪ್ರಾಸ್ತಾವಿಕ ಮಾತನಾಡಿ, ಕಕದ ಸಾವಿರಾರು ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಹೆಣ್ಣು ಮಕ್ಕಳಿಗೆ ಶೌಚಗೃಹಗಳ ಕೊರತೆ ಇದೆ. ಅಪೌಷ್ಟಿಕತೆ ಹೆಚ್ಚುತ್ತಿದ್ದು, ಮಕ್ಕಳಿಗೆ ಅಗತ್ಯ ಪ್ರಮಾಣದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಬರಗಾಲದಂತಹ ಗಂಭೀರ ಸಮಸ್ಯೆಗಳ ಸಂದರ್ಭದಲ್ಲೂ ಕೇಂದ್ರದ ಮಾನದಂಡಗಳು ಪರಿಹಾರಕ್ಕೆ ತೊಡಕಾಗುತ್ತಿವೆ ಎಂದು ಕಿಡಿಕಾರಿದರು.
ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಪ್ರಾಂಶುಪಾಲೆ ಡಾ.ಇಂದುಮತಿ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಚಿಂತಕಿ ಡಾ.ಮೀನಾ ಬಾಳಿ, ಶಿವಶರಣಪ್ಪ ಮುಳೆಗಾಂವ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಶ್ರೀಮಂತ ಹೋಳ್ಕರ್​, ಪ್ರಾಧ್ಯಾಪಕಿ ರಬಿಯಾ, ಡಾ.ನಾಗಪ್ಪ ಗೋಗಿ ಇತರರಿದ್ದರು.
"

ಕಲಬುರಗಿಯನ್ನು ಉಪ ರಾಜಧಾನಿಯಾಗಿ ಘೋಷಿಸಬೇಕು. ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕು.