ಲೇಂಗಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿರುವುದು.
- ಸ್ಥಳಿಯ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಾ ತಿರುಗಾಡುವ ಜನ
- ಮಳೆಗಾಲದಲ್ಲಂತೂ ಸಂಚಾರ ಕಷ್ಟ
ಕಮಲಾಪುರ: ಲೇಂಗಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ನಿತ್ಯವೂ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸ್ಥಳಿಯ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಲೇ ತಿರುಗಾಡುವ ಪರಿಸ್ಥಿತಿ ಇದೆ.
ಲಾಡಮುಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೇಂಗಟಿ ಗ್ರಾಮವಿದ್ದು, ಸುಮಾರು ಐವರು ಸದಸ್ಯರು ಗ್ರಾಮದವರಾಗಿದ್ದಾರೆ. 3500ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯಿದ್ದು, ಎಂಟನೇ ತರಗತಿವರೆಗೆ ಶಿಣ ದೊರೆಯುತ್ತದೆ. ಪ್ರೌಢಶಾಲೆ ಮತ್ತು ಪಿಯು ಶಿಣಕ್ಕಾಗಿ ವಿಕೆ ಸಲಗರ, ಕಾಲೇಜು ಶಿಣಕ್ಕಾಗಿ ಮಹಾಗಾಂವ್ ಕ್ರಾಸ್, ಕಮಲಾಪುರ ಅಥವಾ ಕಲಬುರಗಿಗೆ ಪ್ರಯಾಣಿಸುವ ಸ್ಥಿತಿಯಿದೆ.
ಗ್ರಾಮದ ಜನರು ನಿತ್ಯವೂ ತಾಲೂಕು ಕೇಂದ್ರಕ್ಕೆ ಬರುತ್ತಾರೆ, ಹೋಗುತ್ತಾರೆ. ಅಲ್ಲದೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಹಾರಕೂಡ ಗ್ರಾಮಕ್ಕೆ ಇದೇ ಮಾರ್ಗದಿಂದ ಸಂಚರಿಸಬೇಕು. ಇಂತಹ ಪ್ರಮುಖ ರಸ್ತೆ ಅದೋಗತಿಗೆ ತಲುಪಿದೆ. ಹೆಜ್ಜೆ&ಹೆಜ್ಜೆಗೂ ತಗ್ಗು&ಗುಂಡಿಗಳು ಬಿದ್ದಿವೆ. ಡಾಂಬರ್ ಕಿತ್ತು ಹೋಗಿ ಕಂಕರ್ ಮೇಲೆ ಬಂದಿದ್ದು, ದ್ವಿಚಕ್ರ ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಸಂಚರಿಸಬೇಕಿದೆ. ಬೈಕ್ನಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ.
ರಸ್ತೆ ದುರಸ್ತಿಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಇದೀಗ ಮಳೆಗಾಲವಾಗಿದ್ದು, ಮಳೆ ನೀರು ತಗ್ಗುಗಳಲ್ಲಿ ನಿಂತು ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಕೂಡಲೇ ಸಂಬಂಧಿತರ ಗಮನಹರಿಸಿ ಹಾಳಾಗಿರುವ ರೋಡ್ ದುರಸ್ತಿಗೆ ಮುಂದಾಗಬೇಕು ಎಂಬುದು ಸ್ಥಳಿಯ ಒಕ್ಕೊರಲ ಒತ್ತಾಯವಾಗಿದೆ.
"
ರಾಜ್ಯ ಹೆದ್ದಾರಿಯಿಂದ ಸುಮಾರು ಮೂರೂವರೆ ಕಿಮೀ. ದೂರದಲ್ಲಿ ಲೇಂಟಗಿ ಗ್ರಾಮವಿದ್ದು, ಕೆಲ ವರ್ಷಗಳ ಹಿಂದೆ ಲೇಂಗಟಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಇನ್ನುಳಿದ ಒಂದೂವರೆ ಕಿಮೀ. ರಸ್ತೆ ನಿರ್ಮಿಸದೆ ಹಾಗೆಯೇ ಬಿಡಲಾಗಿದೆ. ಈ ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದ್ದು, ತಗ್ಗು&ಗುಂಡಿಗಳು ಎಲ್ಲೆಡೆ ಆವರಿಸಿವೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಜನತೆಗೆ ಸುಗಮ ಸಂಚಾರ ಕಲ್ಪಿಸಬೇಕು.
— > ಬಸವರಾಜ, ಸ್ಥಳಿಯ ನಿವಾಸಿ