ಯಾದಗಿರಿ ನಗರ ಒಳಚರಂಡಿ ನೀರು ಸಂಸ್ಕರಣಾ ಟಕ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು. ಬಾಬುರಾವ ಕಾಡ್ಲೂರ, ಸಾಯಿಬಣ್ಣ ಕೆಂಗೂರಿ, ರಾಕೇಶರಡ್ಡಿ ಇತರರಿದ್ದರು. 
ರಾಜ್ಯ

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ಸೂಚನೆ
  • ರು.44 ಕೋಟಿ ವೆಚ್ಚದ ಒಳಚರಂಡಿ ನೀರು ಸಂಸ್ಕರಣಾ ಘಟಕಕ್ಕೆ ಅಡಿಗಲ್ಲು
ಯಾದಗಿರಿ: ಬಹುದಿನಗಳ ಬೇಡಿಕೆಯಾಗಿದ್ದ 11.34 ಎಂಎಲ್​ಡಿ ಸಾಮರ್ಥ್ಯದ ನಗರ ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್​ಟಿಪಿ) ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿ,ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಸಂಯುಕ್ತವಾಗಿ ನಗರದ ರೈಲ್ವೆ ಸ್ಟೇಷನ್​ ಹಿಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ 4414.73 ಲಕ್ಷ ರೂ.ವೆಚ್ಚದ ಒಳಚರಂಡಿ ನೀರು ಸಂಸ್ಕರಣಾ ಟಕ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನಗರದ ಒಳಚರಂಡಿ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪರಿಸರ ಮಾಲಿನ್ಯ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆ ಸುಧಾರಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಎಸ್​ಟಿಪಿ ಟಕ ನಿರ್ಮಾಣದಿಂದ ಒಳಚರಂಡಿ ನೀರನ್ನು ವೈಜ್ಞಾನಿಕ ಸಂಸ್ಕರಿಸಿ ಸುರಕ್ಷಿತ ವಿಲೇವಾರಿ ಮಾಡಲು, ಮರುಬಳಕೆ ಮಾಡಬಹುದಾಗಿದೆ. ಇದು ಸಂಪೂರ್ಣ ಯಾಂತ್ರಿಕೃತವಾಗಿದೆ. ತಕ್ಷಣವೇ ಕೆಲಸ ಶುರು ಮಾಡಿ ವರ್ಷದೊಳಗೆ ಕಾಮಗಾರಿ ಮುಗಿಸಬೇಕು. ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳಯಡಿ ಅನುದಾನ ತಂದು ಕೆಲಸ ಮಾಡಿಸುವ ಮೂಲಕ ಜಿಲ್ಲಾ ಕೇಂದ್ರ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ನಗರದಲ್ಲಿ ಈ ಕೆಲಸ ಅವಶ್ಯಕತೆ ಇತ್ತು. ಇದರ ಮನಗಂಡ ಶಾಸಕರು ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದ ನಗರಕ್ಕೆ ಸಾಕಷ್ಟು ಒಳ್ಳೆಯದಾಗಲಿದೆ ಎಂದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ,ಮುಖಂಡರಾದ ಸಾಯಿಬಣ್ಣ ಕೆಂಗೂರಿ, ಎಇಇ ರಾಕೇಶರಡ್ಡಿ, ಯೋಜನಾ ವ್ಯವಸ್ಥಾಪಕ ಸತ್ಯನಾರಾಯಣ ಕುಲಕರ್ಣಿ, ಇಂಜಿನಿಯರ್​ ಸುರೇಶ ದೇವಿಕೇರಿ ಹಾಲಗೇರಾ, ಬಸನಗೌಡ ಮಾಲಿಪಾಟೀಲ್​ ಬೈಜಬಾಳ, ನಾರಾಯಣರಡ್ಡಿ ಪಾಟೀಲ್​ ಇತರರಿದ್ದರು.