ಅಫಜಲಪುರದ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಯನ್ನು ಶಾಸಕ ಎಂ.ವೈ.ಪಾಟೀಲ್​ ಪರಿಶೀಲಿಸಿದರು. ಮಂಜುನಾಥ ಅಂಜುಟಗಿ, ಶಿವಾನಂದ ಗಾಡಿಸಾಹುಕಾರ ಇತರರಿದ್ದರು. 
ರಾಜ್ಯ

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

ಬಾಬುರಾವ ಯಡ್ರಾಮಿ
ಅಫಜಲಪುರ: ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಗುಣಮಟ್ಟದ ವಸ್ತುಗಳನ್ನು ಬಳಸುವುದರ ಜತೆಗೆ ಕಾರ್ಮಿಕರ ಸುರತೆಗೆ ಗಮನಹರಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್​ ಸೂಚನೆ ನೀಡಿದರು. ಪಟ್ಟಣದಲ್ಲಿ 3.68 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿದ ಅವರು, ಗಣ್ಯರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಪ್ರಮುಖರು ಪಟ್ಟಣಕ್ಕೆ ಭೇಟಿ ನೀಡಿದಾಗ ಉಳಿದುಕೊಳ್ಳಲು ಅನುಕೂಲ ಆಗುವಂತೆ ಸುಸಜ್ಜಿತ ಕಟ್ಟಡ ನಿರ್ಮಾಣ ನಡೆಯುತ್ತಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಸುತ್ತಮುತ್ತಲಿನ ಪ್ರದೇಶ ಸ್ವಚ್ಛ ಹಾಗೂ ಸುಂದರವಾಗಿಡುವುದರ ಜತೆಗೆ ಹಸಿರು ವಾತಾವರಣ ಕಾಪಾಡಬೇಕು ಎಂದು ತಾಕೀತು ಮಾಡಿದರು. ಕಲಬುರಗಿ ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ತಾಪಂ ಮಾಜಿ ಉಪಾಧ್ಯ ಶಿವಾನಂದ ಗಾಡಿಸಾಹುಕಾರ, ಪ್ರಮುಖರಾದ ಚನ್ನಬಸಯ್ಯ ಹಿರೇಮಠ, ಇಮಾಮ್​ ಪಟೇಲ್​, ಗಡ್ಡೆಪ್ಪ ಮೇತ್ರಿ, ಶ್ರೀಶೈಲ ಬುಶೆಟ್ಟಿ, ದೊಂಡಿಬಾ ದಳಪತಿ, ಫರ್ದಿನ್​ ಬಳೂರಗಿ  ಇತರರಿದ್ದರು.