ಚಿತ್ತಾಪುರದಲ್ಲಿ ಅಲಂಕಾರಿಕ ವಿದ್ಯುತ್​ ದೀಪ ಅಳವಡಿಕೆ ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಪರಿಶೀಲಿಸಿದರು. ರಾಕೇಶ್​ ರೆಡ್ಡಿ ಇತರರಿದ್ದರು. 
ರಾಜ್ಯ

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮುಖ್ಯಾಧಿಕಾರಿ ಭಾರತಿ ಸೂಚನೆ
  • ಚಿತ್ತಾಪುರದಲ್ಲಿ ವಿವಿಧ ಕಾಮಗಾರಿ ಪರಿಶೀಲನೆ
ಚಿತ್ತಾಪುರ: ಲಾಡ್ಜಿಂಗ್​ ಕ್ರಾಸ್​ನಿಂದ ಬಸ್​ ಡಿಪೋವರೆಗಿನ ರಸ್ತೆ ಮಧ್ಯದಲ್ಲಿ ಡಿವೈಡರ್​ ಹಾಗೂ ಅಲಂಕಾರಿಕ ವಿದ್ಯುತ್​ ಕಂಬಗಳ ಅಳವಡಿಕೆ ಕಾಮಗಾರಿ ಆರಂಭಗೊಂಡಿದ್ದ, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಸೂಚನೆ ನೀಡಿದರು.
ಗುರುವಾರ ಕಾಮಗಾರಿ ಪಗತಿ ಪರಿಶೀಲಿಸಿದ ಅವರು, ನಗರೋತ್ಥಾನ ಯೋಜನೆಯಡಿ 1.20 ಕೋಟಿ ರೂ. ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ಮೊದಲ ಹಂತದಲ್ಲಿ ಲಾಡ್ಜಿಂಗ್​ ಕ್ರಾಸ್​ನಿಂದ ಬಸ್​ ಡಿಪೋವರೆಗೆ 925 ಮೀಟರ್​ ರಸ್ತೆ ಮಧ್ಯೆ ಡಿವೈಡರ್​ ಮತ್ತು 35 ಅಲಂಕಾರಿಕ ವಿದ್ಯುತ್​ ಕಂಬಗಳ ಅಳವಡಿಕೆ ನಡೆಯಲಿದೆ. ಡಿವೈಡರ್​ ಮಧ್ಯೆ ವಿವಿಧ ಗಿಡಗಳನ್ನು ನೆಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚಾಗಲಿದೆ. ಮೂರು ತಿಂಗಳಲ್ಲಿ ಕೆಲಸ ಮುಗಿಯಲಿದೆ. ಬರುವ ದಿನಗಳಲ್ಲಿ ಶಹಾಬಾದ್​ ಹಾಗೂ ಬಸ್​ ನಿಲ್ದಾಣ ರಸ್ತೆಯಲ್ಲಿಯೂ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಿರಿಯ ಅಭಿಯಂತರ ರಾಕೇಶ್​ ರೆಡ್ಡಿ ಇತರರಿದ್ದರು.