ಯಾದಗಿರಿ ನಗರದ ವಾರ್ಡ್​ 30ರಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಗುದ್ದಲಿ ಪೂಜೆ ನೆರವೇರಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್​, ಗಣೇಶ ದುಪ್ಪಲ್ಲಿ, ಚನ್ನಕೇಶವ ಬಾಣತಿಹಾಳ, ಮಲ್ಲಿಕಾರ್ಜುನ ಈಟೆ ಇತರರಿದ್ದರು. 
ರಾಜ್ಯ

ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸೂಚನೆ
ಯಾದಗಿರಿ: ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ವಾರ್ಡ್​ 30ರ ಹೊಸ ಬಸ್​ ನಿಲ್ದಾದ ಎದುರಿಗಿನ ಅನ್ಸಾರ್​ ಹೋಟೆಲ್​ದಿಂದ ಕೆಇಬಿ ಬಾಬಾ ಮನೆಯವರೆಗೆ 60 ಲ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗುಣಮಟ್ಟದಲ್ಲಿ ಕೆಲಸ ಮಾಡಬೇಕೆಂದ ಅವರು, ನಗರದ ವಿವಿಧ ವಾರ್ಡ್​ಗಳಲ್ಲಿನ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾರ್ಯ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ನಿರ್ಮಿತಿ ಕೇಂದ್ರದಿಂದ ಈ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮುಗಿಯುವವರೆಗೂ ಜನರ ಸಂಚಾರ ತೊಂದರೆಯಾಗುತ್ತದೆ. ಆದರೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಪೌರಾಯುಕ್ತ ಉಮೇಶ ಚವ್ಹಾಣ್​, ಗಣೇಶ ದುಪ್ಪಲ್ಲಿ, ಚನ್ನಕೇಶವ ಬಾಣತಿಹಾಳ, ಮಲ್ಲಿಕಾರ್ಜುನ ಈಟೆ, ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ, ಸೋಮು ಮಸಕನಳ್ಳಿ, ಸಾಬಣ್ಣ ಬಾಡಿಯಾಳ, ಬೀರಲಿಂಗ, ಶಿವು ಬೆಳಗುಂದಿ,ಪ್ರಭಾಕರ. ಜಿ, ಇಂಜಿನಿಯರ ರವಿಕುಮಾರ ಇತರರಿದ್ದರು.