Complete the work within 30 days. 
ರಾಜ್ಯ

30ರೊಳಗೆ ಹೇಮೆ ಕಾಮಗಾರಿ ಪೂರ್ಣಗೊಳಿಸಿ

ತುಮಕೂರು ಡೆಸ್ಕ್
ಚಿಕ್ಕನಾಯಕನಹಳ್ಳಿ: ತಾಲೂಕಿನ ಜೀವನಾಡಿಯಾಗಿರುವ ಹೇಮಾವತಿ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ತೋರುತ್ತಿರುವ ರ್ನಿಲಕ್ಷ್ಯದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ಮೇ 30ರೊಳಗಾಗಿ ಕಾಮಗಾರಿ ಮುಗಿಸಿ ನೀರು ಹರಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಚಿಕ್ಕನಾಯಕನಹಳ್ಳಿ ಬಂದ್​ಗೆ ಕರೆ ನೀಡಲಾಗುವುದು ಎಂದು ನೀರಾವರಿ ಹೋರಾಟಗಾರ ಶಾವಿಗೆಹಳ್ಳಿ ಮಧು ಎಚ್ಚರಿಸಿದ್ದಾರೆ.
ರಿ ಹೋರಾಟಗಾರರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ವರ್ಷಗಳಿಂದ ಹೇಮಾವತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮೀನಮೇಷ ಮಾಡುತ್ತಿರುವ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಸಿ.ಬಿ.ಸುರೇಶ್​ ಬಾಬು ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹೇಮಾವತಿ ಅಧಿಕಾರಿಗಳು ಮೇ 30ರೊಳಗೆ ಹೇಮಾವತಿ ಕಾಮಗಾರಿ ಮುಗಿಸುವುದಾಗಿ ಸಾರ್ವಜನಿಕವಾಗಿ ಮಾತುಕೊಟ್ಟಿದ್ದರು. ಆದರೆ ಹೇಮಾವತಿ ಕಾಮಗಾರಿ ಗಮನಿಸಿದರೆ ಇನ್ನು ಹಲವಾರು ದಿನಗಳು ಕಳೆದರೂ ಕಾಮಗಾರಿ ಮುಗಿಯಲ್ಲ. ರೈತರ ತಾಳ್ಮೆಗೂ ಒಂದು ಬೆಲೆ ಇದೆ. ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದರಿಂದ ರೈತರು ಮಕ್ಕಳಂತೆ ಬೆಳೆಸಿದ ತೋಟಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದೆ ರೈತರಿಗೆ ಉಳಿದಿರುವುದು ಹೋರಾಟ ಒಂದೇ ಮೇ 30ರೊಳಗೆ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಹೇಮಾವತಿ ಅಧಿಕಾರಿಗಳು ಮಾತುಕೊಟ್ಟಂತೆ ಹೇಮಾವತಿ ಕಾಮಗಾರಿ ಮುಗಿಸದಿದ್ದರೆ ಮೊದಲ ಅಂತವಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಹಾಗೂ ಚಿಕ್ಕನಾಯಕನಹಳ್ಳಿ ಬಂದ್​ಗೆ ಕರೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳು ತಾಲೂಕಿಗೆ ಭೇಟಿ ನೀಡಿ ಶೀಘ್ರವಾಗಿ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಬೇಕು. ಮೇ 20ರ ಒಳಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸದಿದ್ದರೆ ಮೇ 20ರಂದು ತುಮಕೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್​ ಮಾತನಾಡಿ, ರೈತರು ಜಾಗೃತರಾಗಿದ್ದಾರೆ ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಇಳಿಯುವ ಮನಸ್ಸು ಪ್ರತಿಯೊಬ್ಬರಲ್ಲೂ ಮೂಡಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸ ಸೃಷ್ಟಿಸುವ ಹೋರಾಟಗಳು ನೀರಾವರಿಗೆ ಆಗುತ್ತವೆ ಎಂದರು.