-ಬೆಂಗಳೂರು&ಚಂದಾಪುರ ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳ ಜತೆ ಸಂಸದ ಡಾ.ಮಂಜುನಾಥ್ ವೀಸಿದರು. ಹೆಬ್ಬಗೋಡಿ ನಗರಸಭೆ ಅಧ್ಯಕ್ಷೆ ಸುಜಾತಾ ಹರೀಶ್, ಚಂದಾಪುರ ಪುರಸಭೆ ಅಧ್ಯಕ್ಷೆ ಶಾರದಾ ವರದರಾಜು, ಹಲವು ಸ್ಥಳಿಯ ಜನಪ್ರತಿನಿಧಿಗಳು, ಮುಖಂಡರು ಇದ್ದರು.
ಆನೇಕಲ್ : ಬೆಂಗಳೂರು&ಚಂದಾಪುರ ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ಗ್ರಾಮಾಂತರ ಲೋಕಸಭಾ ಸಂಸದ ಡಾ.ಸಿ.ಎನ್. ಮಂಜುನಾಥ್ ಪರಿಶೀಲಿಸಿದರು.
ಸಾರ್ವಜನಿಕರ ಸಂಚಾರ ಸುಗಮ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ವೀರಸಂದ್ರ ಸಿಗ್ನಲ್ನಲ್ಲಿ ಬಾಕಿ ಇರುವ ಕಾಮಗಾರಿ, ನಾರಾಯಣ ಹೃದಯಾಲಯದ ಬಳಿ ಮಧ್ಯ ವಿಭಜಕ ದಾಟುವಿಕೆ ನಿಮಾರ್ಣದ ಪ್ರಸ್ತಾವನೆ, ಚಂದಾಪುರ ವಿಸ್ತರಣೆ ಕಾಮಗಾರಿ, ಹಳೆ ಚಂದಾಪುರ, ಬಳಗಾರನಹಳ್ಳಿ ಮತ್ತು ಗೆಸ್ಟ್ಲೈನ್ ಬಳಿ ನಡೆಯುತ್ತಿರುವ ವಿಪಿಒ ಹಾಗೂ ಸರ್ವಿಸ್ ರಸ್ತೆಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ಮಾಡಬೇಕು ಎಂದರು.
ಹೊಸೂರು ಮಾರ್ಗವಾಗಿ ಪ್ರತಿದಿನ ಹೆದ್ದಾರಿಯಲ್ಲಿ ಸಂಚಾರ ಸಿಕ್ಕು ಉಂಟಾಗುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ಕಾಮಗಾರಿಗೆ ವೇಗ ಕಂಡುಕೊಳ್ಳಬೇಕು. ಎಲ್ಲ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮುಗಿಸಬೇಕು ಎಂದು ಸೂಚಿಸಿದರು.