ಯಾದಗಿರಿ ಎಸ್‌ಪಿ ಕಚೇರಿ ಆವರಣದಲ್ಲಿ ಸೋಮವಾರ ಶ್ವಾನ ಘಟಕದ ಕಟ್ಟಡ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೇಶ, ಡಿವೈಎಸ್‌ಪಿ ಭರತಕುಮಾರ ಇತರರಿದ್ದರು. 
ರಾಜ್ಯ

ಗುಣಮಟ್ಟದೊಂದಿಗೆ ಸಕಾಲಕ್ಕೆ ಕೆಲಸ ಮುಗಿಸಿ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್ ಸೂಚನೆ
  • ಸೈಬರ್ ಠಾಣೆ, ಶ್ವಾನ ಘಟಕ ಕಟ್ಟಡ ಕಾಮಗಾರಿಗೆ ಚಾಲನೆ
ಯಾದಗಿರಿ :

ನಗರದ ಎರಡು ಕಡೆ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ತಡೆ (ಸೆನ್) ಠಾಣೆ ಮತ್ತು ಆರು ಶ್ವಾನ ಘಟಕಗಳ ಕಟ್ಟಡ ನಿರ್ಮಾಣ ಕಾರ್ಯ ಸಕಾಲಕ್ಕೆ ಗುಣಮಟ್ಟದೊಂದಿಗೆ ಮುಗಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಂಬAಽತ ಅಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಕಚೇರಿ ಆವರಣದಲ್ಲಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಆರು ಶ್ವಾನ ಘಟಕ ಮತ್ತು ಗ್ರಾಮೀಣ ಠಾಣೆ ಸಮೀಪ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತುಗಳ ತಡೆ (ಸೆನ್) ಠಾಣೆ ಕಟ್ಟಡ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ ಅವರು, ಕೆಕೆಆರ್‌ಡಿಬಿ ಅನುದಾನದಲ್ಲಿ ಈ ಎರಡು ಕಾಮಗಾರಿ ಕೈಗೊಳ್ಳಲಾಗಿದೆ. ಸೈಬರ್ ಠಾಣೆಗೆ ೧.೩೦ ಕೋಟಿ ರೂ. ಮತ್ತು ಶ್ವಾನ ಘಟಕಗಳ ನಿರ್ಮಾಣಕ್ಕೆ ೧.೨೦ ಕೋಟಿ ರೂ. ಅನುದಾನ ನೀಡಲಾಗಿದ್ದು, ಒಂಬತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಗಡಿ ಭಾಗದ ಈ ಜಿಲ್ಲೆಯಲ್ಲಿ ಸೈಬರ್ ಠಾಣೆಗೆ ಸ್ವತಂತ್ರ ಕಟ್ಟಡ ಮತ್ತು ಶ್ವಾನ ಘಟಕಗಳ ಅಗತ್ಯವಿರುವುದನ್ನು ಎಸ್‌ಪಿ ಪೃಥ್ವಿಕ್ ಶಂಕರ್ ಗಮನಕ್ಕೆ ತಂದ ತಕ್ಷಣ ಕೆಕೆಆರ್‌ಡಿಬಿಯಿಂದ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.
ಜÁಗತಿಕ ಬದಲಾವಣೆ ಪರಿಣಾಮದಿಂದ ನಾವೆಲ್ಲರೂ ಡಿಜಿಟಲï ತಂತ್ರe್ಞÁನ ಬಳಸಿ ವಹಿವಾಟು ಮಾಡುತ್ತಿದ್ದೇವೆ. ಆದರೂ ಕೆಲವೊಮ್ಮೆ ಅನೇಕ ಅಪರಾಧಗಳು ನಡೆಯುತ್ತಿವೆ. ಜಿ¯್ಲÁ ಪೊಲೀಸ್ ಅಽಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿ ವಂಚನೆಗೆ ಒಳಗಾದ ಜನರಿಗೆ ಸಾಧ್ಯವಾದಷ್ಟು ನ್ಯಾಯ ಒದಗಿಸುತ್ತಿz್ದÁರೆ ಎಂದರು.
ಎಸ್‌ಪಿ ಪೃಥ್ವಿಕ್ ಶಂಕರ್ ಮಾತನಾಡಿ, ಸರ್ಕಾರದಿಂದ ಈಗಾಗಲೇ ಪೊಲೀಸ್ ಇಲಾಖೆಗೆ ೭ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಶ್ವಾನ ಘಟಕ, ನಗರದಲ್ಲಿ ಸೈಬರ್ ಕ್ರೆÊಂ ಠಾಣೆ, ವಡಗೇರಾ ತಾಲೂಕಿನ ಬೆಂಡೆಬೆAಬಳಿಯಲ್ಲಿ ಹೊರ ಪೊಲೀಸ್ ಠಾಣೆ ಮತ್ತು ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣೆ ವಸತಿಗೃಹ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಾನು ಜಿ¯್ಲೆಗೆ ಆಗಮಿಸಿದ ಸಂದರ್ಭದಲ್ಲಿ ಮೊದಲು ಇಲ್ಲಿನ ಸಮಸ್ಯೆಗಳನ್ನು ಅರಿತು ಹಂತ-ಹAತವಾಗಿ ಪರಿಹಾರಕ್ಕೆ ಯತ್ನಿಸಿದ್ದೇನೆ. ಇಲಾಖೆಯಲ್ಲಿ ಕ್ರಿಯಾಶೀಲತೆ ಮೂಲಕ ಹೊಸ ಬದಲಾವಣೆ ತರಲಾಗಿದೆ. ಹಲವಾರು ಅಕ್ರಮಗಳಿಗೆ ಕಡಿವಾಣ ಹಾಕಿದ ಆತ್ಮತೃಪ್ತಿ ನನಗಿದೆ ಎಂದರು.
ಡಿವೈಎಸ್‌ಪಿ ಭರತಕುಮಾರ, ಅಽಕಾರಿಗಳಾದ ಶ್ರೀದೇವಿ ಬಿರಾದಾರ, ಪಂಡಿತ ಸಾಗರ್, ಭೀಮಾಶಂಕರ, ಕಾಶೀನಾಥರಡ್ಡಿ, ಶರಣಗೌಡ, ಮಂಜನಗೌಡ ಪಾಟೀಲï ಇತರರಿದ್ದರು.
"

ಪೃಥ್ವಿಕ್ ಶಂಕರ್ ಎಸ್‌ಪಿಯಾಗಿ ಇಲ್ಲಿಗೆ ಬಂದ ಬಳಿಕ ಅನೇಕ ಬದಲಾವಣೆಗಳಾಗಿವೆ. ಜನಮೆಚ್ಚುವಂಥ ಕೆಲಸ ಮಾಡುತ್ತಿದ್ದಾರೆ. ಎಲ್ಲ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಸೇರಿ ಅಪರಾಧ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.| ಚನ್ನಾರಡ್ಡಿ ಪಾಟೀಲ್ಶಾಸಕ